ಬೆಂಗಳೂರು: ನಗರದ ಜಾಲಹಳ್ಳಿ ಕ್ರಾಸ್ ಬಳಿಯಲ್ಲಿರುವಂತ ರಾಕ್ ಲೈನ್ ಮಾಲ್ ಗೆ ಬಿಬಿಎಂಪಿಯಿಂದ ತೆರಿಗೆ ಪಾವತಿಸದ ಕಾರಣ ಬೀಗ ಮುದ್ರೆ ಜಡಿಯಲಾಗಿತ್ತು. ಇಂತಹ ಬೀಗ ಮುದ್ರೆಯನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ.
ದಿನಾಂಕ 14-02-2024ರಂದು ಬೆಂಗಳೂರಿನ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ರಾಕ್‌ಲೈನ್ ಮಾಲ್ ಬಾಕಿ ತೆರಿಗೆ ಪಾವತಿಸದ ಕಾರಣ ಪಾಲಿಕೆ ಕಂದಾಯ ಅಧಿಕಾರಿಗಳು ಸೀಜ್ ಮಾಡಿದ್ದರು.
ರಾಕ್ ಲೈನ್ ಮಾಲ್ ನಿಂದ 2011 ರಿಂದ 2022-23 ರವರೆಗೆ ಬಾಕಿ ಉಳಿಸಿಕೊಂಡಿರುವ 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿದೆ. ಬಾಕಿ ತೆರಿಗೆ ಪಾವತಿಸಲು ಈಗಾಗಲೇ ಡಿಮಾಂಡ್ ನೋಟೀಸ್ ನೀಡಿದ್ದರು ತೆರಿಗೆಯನ್ನು ಪಾವತಿಸಿರುವುದಿಲ್ಲ. ಹೀಗಾಗಿ ದಾಸರಹಳ್ಳಿ ವಲಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಾಕ್ ಲೈನ್ ಮಾಲ್ ಅನ್ನು ಸೀಜ್ ಮಾಡಿದ್ದರು.
ಬಿಬಿಎಂಪಿ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ರಾಕ್ ಲೈನ್ ಮಾಲ್ ಮಾಲೀಕರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಬಿಬಿಎಂಪಿ ಬೀಗ ಮುದ್ರೆಯನ್ನು ತೆರವುಗೊಳಿಸುವಂತೆ ಅರ್ಜಿಯಲ್ಲಿ ಕೋರಿದ್ದರು.
ಇದೀಗ ಹೈಕೋರ್ಟ್ ರಾಕ್ ಲೈನ್ ಮಾಲ್ ಬೀಗಮುದ್ರೆಯನ್ನು ತೆರವುಗೊಳಿಸುವಂತೆ ಸೂಚಿಸಿದೆ. ಅಲ್ಲದೇ ಬಿಬಿಎಂಪಿ ಆದೇಶ ಪ್ರಶ್ನಿಸಿ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಕಾಲಾವಕಾಶ ನೀಡಿ, ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
Job Alert: ‘ಉದ್ಯೋಗಾಕಾಂಕ್ಷಿ’ಗಳಿಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರದಲ್ಲೇ ‘1000 VA ನೇಮಕಾತಿ’ಗೆ ಅಧಿಸೂಚನೆ
‘BMTC ನೌಕರ’ರಿಗೆ ಗುಡ್ ನ್ಯೂಸ್: ‘ಅಪಘಾತ ವಿಮಾ ಪರಿಹಾರ’ ಮೊತ್ತ ‘3 ಲಕ್ಷದಿಂದ 1 ಕೋಟಿ’ಗೆ ಹೆಚ್ಚಳ
BIGG NEWS: ನಾಮಫಲಕ ವಿವಾದ: ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ವರ್ಗಾವಣೆ!?