ಬೆಂಗಳೂರು: ವಸತಿ ಶಾಲೆಗಳಲ್ಲಿ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಕುವೆಂಪು ವಿರಚಿತ ಸಾಲುಗಳನ್ನು ಬದಲಾಯಿಸಿ, “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎನ್ನುವ ನಾಮಮಫಲಕ ಈಗ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಸಮಾಜ ಕಲ್ಯಾಣ ಅಧಿಕಾರಿ ಮಣಿವಣ್ಣನ್ ಅವರನ್ನು ಸರ್ಕಾರ ಬೇರೆ ಕಡೆ ವರ್ಗಾವಣೆ ಮಾಡುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.
1998 ಐಎಎಸ್ ಬ್ಯಾಚ್ ಅಧಿಕಾರಿ ಮಣಿವಣ್ಣನ್ ಅವರ ಕಾರ್ಯವೈಕರಿ ಬಗ್ಗೆ ಇಲಾಖೆಯಲ್ಲಿ ಅಸಮಾಧಾನ ಕೂಡ ಇದೇ ಎನ್ನಲಾಗಿದ್ದು, ಇಲಾಖೆಗೆ ಸಂಬಂಧಪಟ್ಟ ಯಾವುದೇ ಕೆಲಸ ಹಾಗೂ ಬದಲಾವಣೆ ಮಾಡುವುದಕ್ಕೆ ಅವರು ಮನಸ್ಸು ಮಾಡುತ್ತಿಲ್ಲ ಎನ್ನಲಾಗಿದೆ. ಇದಲ್ಲದೇ ಆಪ್ತರಿಗೆ ಇಲಾಖೆಯಲ್ಲಿ ಸ್ಥಾನ ನೀಡುತ್ತಿದ್ದಾರೆ ಎನ್ನಲಾಗಿದ್ದು, ಇಲಾಖೆಯಲ್ಲಿ ಕೆಲಸಗಳನ್ನು ಕೂಡ ತಮ್ಮ ಆಪ್ತರಿಗೆ ನೀಡುತ್ತಿದ್ದಾರೆ ಎನ್ನುವ ಆರೋಫ ಕೇಳಿ ಬಂದಿದೆ. ಕೆಲ ತಿಂಗಳ ಹಿಂದೆ ಶಾಸಕರೊರಬ್ಬರು ಮತ್ತು ಮಹಿಳಾ ಐಎಎಸ್ ಅಧಿಕಾರಿಗಳ ನಡುವಿನ ವಿವಾದದಲ್ಲಿ ಸಂಧಾನವನ್ನು ಕೂಡ ಮಾಡಲು ಪಿ.ಮಣಿವಣ್ಣನ್ ಮುಂದಾಗಿದ್ದರು ಎನ್ನುವ ಪೋಟೋಗಳು ವೈರಲ್ ಆಗಿದ್ದವು.
BIGG NEWS: ಆಕ್ರೋಶದ ಬೆನ್ನಲೇ ವಿವಾದತ್ಮಕ ನಾಮಫಲಕ ವಾಪಸ್ಸು ಪಡೆದ ರಾಜ್ಯ ಸರ್ಕಾರ!
BREAKING: ‘ಸಿಎಂ ಸಿದ್ದರಾಮಯ್ಯ’ ಸೇರಿ ಕಾಂಗ್ರೆಸ್ ನಾಯಕರಿಗೆ ತಾತ್ಕಾಲಿಕ ರಿಲೀಫ್ : ‘FIR’ಗೆ ಸುಪ್ರೀಂ ಕೋರ್ಟ್ ತಡೆ