ಬೆಂಗಳೂರು: ನಗರದಲ್ಲಿ ಒಂದೇ ಮನೆಗೆ ಒಂದು ಬ್ಯಾಂಕ್ ನಿಂದ ಲೋನ್ ಸಿಗೋದೇ ಕಷ್ಟ. ಹೀಗಿರುವಾಗ ಒಂದೇ ಮನೆಗೆ ಬರೋಬ್ಬರಿ 21 ಬ್ಯಾಂಕ್ ಗಳಿಂದ ಕೋಟ್ಯಂತರ ಸಾಲವನ್ನು ವ್ಯಕ್ತಿಯೊಬ್ಬ ಪಡೆದಿದ್ದಾರೆ. ಆ ಬಳಿಕ ಬ್ಯಾಂಕ್ ಗಳಿಗೆ ಸಾಲ ಕಟ್ಟಲಾಗದೇ, ಪರಾರಿಯಾಗಿದ್ದಾನೆ. ಇಂತಹ ಮನೆಯನ್ನು ಹರಾಜು ಹಾಕೋದಕ್ಕಾಗಿ 21 ಬ್ಯಾಂಕ್ ಗಳು ಪೈಪೋಟಿ ಕೂಡ ನಡೆಸಿರೋ ಘಟನೆ ನಡೆದಿದೆ.
ಬೆಂಗಳೂರಿನ ಬೊಮ್ಮನಹಳ್ಳಿಯ ಬೇಗೂರಿನ ನಂಜುಂಡಪ್ಪ ಲೇಔಟ್ ನಲ್ಲಿನ ನಂಜುಂಡಯ್ಯ ಎಂಬುವರು ತಮ್ಮ ಒಂದೇ ಮನೆಯ ಮೇಲೆ 21 ಬ್ಯಾಂಕ್ ಗಳಿಂದ 5 ಕೋಟಿಗೂ ಹೆಚ್ಚು ಸಾಲ ಪಡೆದಿದ್ದಾರೆ. ಸಾಲ ಕಟ್ಟದ ಕಾರಣ, ನಂಜುಂಡಯ್ಯ ಮನೆಗೆ 21 ಬ್ಯಾಂಕ್ ಗಳು ಮನೆ ಹರಾಜು ಹಾಕೋ ಬಗ್ಗೆ ನೋಟಿಸ್ ಅಂಟಿಸಿದ್ದಾರೆ.
ಸಾಲ ಕಟ್ಟಲಾಗದೇ ಮನೆಗೆ ಬೀಗ ಹಾಕಿಕೊಂಡು ನಂಜುಂಡಯ್ಯ ಪರಾರಿಯಾಗಿದ್ದು, ಈಗ ನಾ ಮುಂದು, ತಾ ಮುಂದೆ ಎನ್ನುವಂತೆ ಬ್ಯಾಂಕ್ ಗಳು ನಂಜುಂಡಯ್ಯ ಮನೆಯನ್ನು ಹರಾಜು ಮಾಡೋದಕ್ಕೆ ತುದಿಗಾಲಲ್ಲಿ ನಿಂತಿವೆ.
ಒಂದು ಮನೆಗೆ ಒಂದು ಬಾರಿಗೆ ಸಾಲ ಕೊಡುವುದಕ್ಕೆ ವಿವಿಧ ದಾಖಲೆ ಪತ್ರಗಳನ್ನು ಹತ್ತಾರು ಬಾರಿ ಪಡೆದು, ಪರಿಶೀಲಿಸೋ ಬ್ಯಾಂಕ್ ಗಳು ಮಾತ್ರ, ನಂಜುಂಡಯ್ಯಗೆ 21 ಬ್ಯಾಂಕ್ ಗಳು ಸಾಲ ಕೊಟ್ಟಿದ್ದು ಹೇಗೆ ಎಂಬ ಅನುಮಾನ ಈಗ ಕಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BREAKING: ಚೆಕ್ ಬೌನ್ಸ್ ಪ್ರಕರಣ: ನಿರ್ದೇಶಕ ‘ರಾಜ್‌ಕುಮಾರ್ ಸಂತೋಷಿ’ಗೆ ಜಾಮೀನು