ಬೆಂಗಳೂರು: ರಥ ಸಪ್ತಮಿ ದಿನವಾದ ಫೆಬ್ರವರಿ 16ರಂದು ಕೊಳ್ಳೆಗಾಲದ ಶ್ರೀರಾಮ ದೇವಸ್ಥಾನದಲ್ಲಿ ರಥೋತ್ಸವ ನಡೆಯಿತು. ಜನಪ್ರಿಯ ಉದ್ಯಮಿ ಸುನಿತಾ ತಿಮ್ಮೇಗೌಡ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುನಿತಾ ಅವರ ತಾಯಿ ದಿ. ಸಾವಿತ್ರಮ್ಮ ತಿಮ್ಮೇಗೌಡ ಅವರ ಜನ್ಮದಿನದ ಅಂಗವಾಗಿ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮವನ್ನೂ ನೆರವೇರಿಸಲಾಯಿತು. ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನಜನಿತರಾಗಿದ್ದ ಸಾವಿತ್ರಮ್ಮ ಅವರ ಸೇವೆಗಳನ್ನು ಸ್ಮರಿಸಲಾಯಿತು.
ಶ್ರೀರಾಮ ದೇವಸ್ಥಾನದಲ್ಲಿ ನಡೆದ ರಥೋತ್ಸವ ಸಂದರ್ಭದಲ್ಲಿ ಸಾವಿತ್ರಮ್ಮ ಅವರ ಭಾವಚಿತ್ರವನ್ನಿಟ್ಟು ಪುಷ್ಪಾರ್ಚನೆ ಮಾಡಲಾಯಿತು ಹಾಗೂ ಮೆರವಣಿಗೆ ಮಾಡಲಾಯಿತು. ದೇಗುಲ ನಿರ್ಮಾಣದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಅವರ ಕಾರ್ಯವನ್ನು ಸ್ಮರಿಸಿಕೊಳ್ಳಲಾಯಿತು. ರಥೋತ್ಸವದ ಬಳಿಕ ದೇವಸ್ಥಾನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಈ ಎಲ್ಲ ಕಾರ್ಯಕ್ರಮಗಳನ್ನು ಸಾವಿತ್ರಮ್ಮ ಟ್ರಸ್ಟ್ ಮೂಲಕ ಉದ್ಯಮಿ ಸುನಿತಾ ಅವರು ನೆರವೇರಿಸಿದರು.
ಸಾವಿತ್ರಮ್ಮ ತಿಮ್ಮೇಗೌಡ ಅವರು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಪ್ರಿಯರಾಗಿದ್ದರು. ಕರ್ನಾಟಕದಾದ್ಯಂತ ಹಲವಾರು ದೇವಸ್ಥಾನಗಳ ಅಭಿವೃದ್ದಿ ಕಾರ್ಯದಲ್ಲಿ ತೊಡಗಿದ್ದರು. ಅದೇ ರೀತಿ ಅವರ ಹೆಸರಿನಲ್ಲಿ ಮಾಡಿರುವ ಟ್ರಸ್ಟ್ ಮೂಲಕ ಸುನಿತಾ ತಿಮ್ಮೇಗೌಡ ಅದೇ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರಿಸಿದ್ದಾರೆ.
ಸುನಿತಾ ಅವರು ಕೊಳ್ಳೆಗಾಲದ ಲಕ್ಷ್ಮೀನಾರಾಯಣ ದೇವಸ್ಥಾನದ ಅಭಿವೃದ್ದಿಯಲ್ಲಿ ಕೈಜೋಡಿಸಿದ್ದರು. ಅದೇ ರೀತಿ ಬೆಂಗಳೂರಿನ ಜೆಪಿ ನಗರದ ವೆಂಕಟರಮಣಸ್ವಾಮಿ ದೇಗುಲದ ಅಭಿವೃದ್ದಿಯಲ್ಲಿ ಮುಂಚೂಣಿ ಸ್ಥಾಣ ಪಡೆದಿದ್ದರು. ಅದೇ ರೀತಿ ಅವರು ಬೆಂಗಳೂರಿನ ಚಿಕ್ಕಪೇಟೆ ರಾಘವೇಂದ್ರ ಸ್ವಾಮಿ ದೇಗುಲದ ನಿರ್ಮಾಣದಲ್ಲೂ ಪಾಲ್ಗೊಂಡಿದ್ದರು. ಧರ್ಮಸ್ಥಳ ಸಮೀಪದ ರಾಮ ಮಂದಿರ ನಿರ್ಮಾಣದ ನೇತೃತ್ವ ವಹಿಸಿದ್ದರು. ತಿರುಪತಿ ದೇಗುಲದಲ್ಲಿ ವೈಕುಂಠ ಏಕಾದಶಿ ದಿನ ಹೂವಿನ ಅಲಂಕಾರ ಹಾಗೂ ತಿರುವಣ್ಣಾಮಲೈ ರಮಣಶ್ರೀ ಆಶ್ರಮದಲ್ಲಿ ಅನ್ನದಾನದಂಥ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಸಾವಿತ್ರಮ್ಮ ಅವರ ಜನ್ಮದಿನದ ಅಂಗವಾಗಿ ಕೊಳ್ಳೆಗಾಲ ಪರಿಸರ ಅನಾಧ ಆಶ್ರಮಗಳು ಹಾಗೂ ಶ್ರವಣ ಹಾಗೂ ವಾಕ್ ದೋಷವುಳ್ಳ ಮಕ್ಕಳಿಗೂ ಅನ್ನದಾನವನ್ನುಆಯೋಜಿಸಲಾಗಿತ್ತು. ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯಗಳನ್ನು ನಡೆಸಲಾಯಿತು.
ಬಾಲರಾಮನಿಗೆ ಪ್ರತಿದಿನ ಒಂದು ಗಂಟೆ ವಿಶ್ರಾಂತಿ:ಇನ್ನುಂದೆ ಈ ಅವಧಿಯಲ್ಲಿ ‘ರಾಮಮಂದಿರ’ ಬಂದ್
ಮೈಸೂರಿನಲ್ಲಿ ಮತ್ತೊಮ್ಮೆ ಮೋದಿ ಗೋಡೆ ಬರಹಕ್ಕೆ ಜಗದೀಶ್ ಶೆಟ್ಟರ್ ಚಾಲನೆ