ತುಮಕೂರು: ಆಸ್ತಿಗಾಗಿ ಹೆತ್ತತಾಯಿಯನ್ನೇ ಮಗ ಸೊಸೆ ಗೃಹಬಂಧನದಲ್ಲಿಟ್ಟಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ನಗರದ ಶಿರಾಗೇಟ್‌ನಲ್ಲಿರುವ ಸಾಡೇಪುರದಲ್ಲಿ ಘಟನೆ ನಡೆದಿದೆ. ಕಳೆದ 11 ತಿಂಗಳಿನಿಂದ ಪಂಕಜ ಅವರನ್ನು ಮನೆಯಲ್ಲಿ ಕೂಡಿ ಇಟ್ಟು ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಮಗ ಜಿಮ್ ಸುರೇಶ್ ಮತ್ತು ಸೊಸೆ ಆಶಾಳಿಂದ ಈಕೃತ್ಯ ನಡೆದಿದೆ ಎನ್ನಲಾಗಿದೆ.
ಘಟನ ಸ್ಥಳಕ್ಕೆ ಸಾಂತ್ವನ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ವಸ್ತುಸ್ಥಿತಿಯನ್ನು ನೋಡಿ ಗರಂ ಆಗಿದ್ದಾರೆ ಎನ್ನಲಾಗಿದೆ. ಇನ್ನೂ ಪಂಕಜ ಅವರ ಬಳಿ ಹನ್ನೊಂದು ಮನೆ ಮತ್ತು ಐವತ್ತು ಸಾವಿರ ಪಿಂಚಣಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ವೃದ್ದೆಯನ್ನು ಮನೆಯಲ್ಲಿ ಇಟ್ಟುಕೊಂಡು ಚಿತ್ರಹಿಂಸೆ ನೀಡುತ್ತಿದ್ದರು ಅಂತ ಪಂಕಜ ಅವರು ಅಧಿಕಾರಿಗಳ ಮುಂದೆ ತಮ್ಮ ನೋವನ್ನು ತೋಡಿ ಕೊಂಡಿದ್ದಾರೆ. ಇನ್ನೂ ಘಟನೆ ಸಂಬಂಧ ಅಧಿಕಾರಿಗಳು ಮಗ ಮತ್ತು ಸೊಸೆಗೆ ಕಾನೂನು ಎಚ್ಚರಿಕೆ ನೀಡಿ, ಮುಂದಿನ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಸದ್ಯ ವೃದ್ದೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಅಂಥ ತಿಳಿದು ಬಂದಿದೆ.
BREAKING: ಮ್ಯಾನ್ಮಾರ್ನಲ್ಲಿ 4.4 ತೀವ್ರತೆಯ ಭೂಕಂಪ, ಈಶಾನ್ಯ ಭಾರತದಲ್ಲೂ ನಡುಗಿದ ಭೂಮಿ!
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿಂದ FASTag ಖಾತೆ ಡಿಲೀಟ್ ಮಾಡುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ!