ಬೆಂಗಳೂರು: ಮಂಗಳೂರಿನ ಸೆಂಟ್ ಜೆರೋಸಾ ಶಾಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲಿಸ್ ಠಾಣೆಯ ಪೊಲಿಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಪ್ರಕರಣ ಕುರಿತು ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಅನಿಲ್ ಜರಾಬ್ ಲೊಬೊ ಅವರು ದೂರು ಕೊಟ್ಟಿದ್ದಾರೆ.
ಅದು ಶಾಲೆಯಲ್ಲಿ ನಡೆದಿರುವ ಘಟನೆಯ ಬಗ್ಗೆ ದೂರು ಕೊಟ್ಟಿದ್ದಾರೆ. ಮೊದಲು ಮಕ್ಕಳು ದೂರು ಕೊಟ್ಟಾಗ ಅದನ್ನು ಎಫ್ಐ ಆರ್ ಮಾಡಲಿಲ್ಲ. ಅದನ್ನು ಪ್ರಾಥಮಿಕ ವಿಚಾರಣೆ ಮಾಡಿದಾಗ ಅದರಲ್ಲಿ ತಪ್ಪು ಕಂಡಿಲ್ಲ ಅಂತ ಎಫ್ ಐ ಆರ್ ಮಾಡಿಲ್ಲ ಅಂತೀರಾ. ಶಾಸಕರ ವಿರುದ್ದ ಯಾವುದೇ ವಿಚಾರಣೆ ಮಾಡದೇ ಎಫ್ ಐಆರ್ ಮಾಡಿದ್ದೀರಾ. ಪೊಲಿಸರು ತಮ್ಮ ಕೆಲಸದಲ್ಲಿ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಶಾಸಕರ ಮೇಲೆ ಎಫ್ ಐ ಆರ್ ಹಾಕಿರುವ ಪೊಲಿಸ್ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು. ಇಲ್ಲದಿದ್ದರೆ ತಾರರಮ್ಯ ಮಾಡಿದಂತೆ ಆಗುತ್ತದೆ ಎಂದು ಹೇಳಿದರು.
ಶಿಕ್ಷಕಿಯನ್ನು ಆ ಶಾಲೆಯ ಆಡಳಿತ ಮಂಡಳಿ ಅಮಾನತು ಮಾಡಿದೆ. ಆ ಆಡಳಿತ ಮಂಡಳಿಯನ್ನು ನಾನು ಅಭಿನಂದಿಸುತ್ತೇನೆ. ಅವರು ನ್ಯಾಯಯುತವಾದ ತೀರ್ಮಾನ ಮಾಡಿದ್ದಾರೆ. ಸರ್ಕಾರವೂ ನ್ಯಾಯಯುತವಾದ ತೀರ್ಮಾನ ಮಾಡಿದರೆ ಮಾತ್ರ ಸರ್ಕಾರಕ್ಕೆ ಗೌರವ ಬರುತ್ತದೆ ಎಂದು ಹೇಳಿದರು.
‘ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಹೀಗಿದೆ ‘ರಾಜ್ಯ ಸರ್ಕಾರ’ದಿಂದ ಮಾನ್ಯತೆ ಪಡೆದ ‘ಖಾಸಗಿ ಆಸ್ಪತ್ರೆ’ಗಳ ಪಟ್ಟಿ
BIG NEWS: ‘ಶಾಲಾ-ಕಾಲೇಜು’ಗಳಲ್ಲಿ ‘ಧಾರ್ಮಿಕ ಹಬ್ಬ’ಗಳನ್ನು ಆಚರಿಸುವಂತಿಲ್ಲ – ‘ರಾಜ್ಯ ಸರ್ಕಾರ’ ಆದೇಶ