ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಅವರು ಫೆಬ್ರವರಿ.16ರಂದು ಬೆಳಿಗ್ಗೆ 10.15ಕ್ಕೆ 15ನೇ ಬಾರಿ ತಮ್ಮ ಚೊಚ್ಚಲ ರಾಜ್ಯ ಬಜೆಟ್-2024-25 ( Karnataka Budget 2024-25 ) ಅನ್ನು ಮಂಡಿಸಲಿದ್ದಾರೆ. ಈ ಬಜೆಟ್ ನಲ್ಲಿ ಯಾವೆಲ್ಲ ಘೋಷಣೆಯನ್ನು ಲೋಕಸಭಾ ಚುನಾವಣೆಯ ವೇಳೆಯಲ್ಲಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಶೇಷ ಸಚಿವ ಸಂಪುಟ ಸಭೆಯನ್ನು ನಡೆಸಲಿದ್ದಾರೆ. ಫೆ.16ರಂದು ಬೆಳಿಗ್ಗೆ ನಡೆಯುವಂತ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತಮ್ಮ 15ನೇ ಬಾರಿ ಮಂಡಿಸುತ್ತಿರುವಂತ ರಾಜ್ಯ ಬಜೆಟ್ ಗೆ ಅನುಮೋದನೆಯನ್ನು ಪಡೆಯಲಿದ್ದಾರೆ.
ವಿಶೇಷ ರಾಜ್ಯಸಚಿವ ಸಂಪುಟದಲ್ಲಿ ಬಜೆಟ್ ಗೆ ಅನುಮೋದನೆ ಪಡೆದ ನಂತ್ರ, ಅವರು ಅಲ್ಲಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದು, ಫೆ.16ರಂದು ಬೆಳಿಗ್ಗೆ 10.15ಕ್ಕೆ ರಾಜ್ಯ ಬಜೆಟ್ ಅನ್ನು ಸದನದಲ್ಲಿ ಮಂಡಿಸಲಿದ್ದಾರೆ.
ಶುಕ್ರವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸುತ್ತಿರುವಂತ ರಾಜ್ಯ ಬಜೆಟ್ ಬಗ್ಗೆ ತೀವ್ರತರವಾದಂತ ನಿರೀಕ್ಷೆಗಳಿದ್ದು, ಯಾವ ಯಾವ ಕ್ಷೇತ್ರಗಳಿಗೆ ಅನುದಾನ, ಯಾರಿಗೆಲ್ಲ ಬಂಫರ್ ಗಿಫ್ಟ್ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
1056 ಖಾಲಿ ಹುದ್ದೆಗಳ ಭರ್ತಿಗೆ ‘UPSC’ ಅಧಿಸೂಚನೆ ಬಿಡುಗಡೆ : ಅರ್ಜಿ ಸಲ್ಲಿಕೆಗೆ ‘ಡೈರೆಕ್ಟ್ ಲಿಂಕ್’ ಇಲ್ಲಿದೆ
BREAKING : ಮದ್ಯ ನೀತಿ ಹಗರಣ : ದೆಹಲಿ ಸಿಎಂ ‘ಕೇಜ್ರಿವಾಲ್’ಗೆ 6ನೇ ಬಾರಿಗೆ ‘ED ಸಮನ್ಸ್’