ಬೆಂಗಳೂರು: ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರಿಗೆ ಜೀಪ ಬೆದರಿಕೆ ಹಾಕಿದ ಆರೋಪದಲ್ಲಿ ಮಾಜಿ ಕಾರ್ಪೋರೇಟರ್ ಪದ್ಮರಾಜ್ ಅವರನ್ನು ಬಂಧಿಸಲಾಗಿದೆ.
ಈ ಕುರಿತಂತೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಅವರ ವಿರುದ್ಧ ದೂರು ದಾಖಲಾಗಿತ್ತು. ಮಹಾರಲಕ್ಷ್ಮೀ ಲೇಔಟ್ ಶಾಸಕ ಕೆ.ಗೋಪಾಲಯ್ಯ ಅವರಿಗೆ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು.
ಈ ದೂರಿನ ಹಿನ್ನಲೆಯಲ್ಲಿ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಮಾಜಿ ಕಾರ್ಪೊರೇಟರ್ ಪದ್ಮರಾಜ್ ಅವರನ್ನು ಬಂಧಿಸಿದ್ದಾರೆ. ಆ ನಂತ್ರ ಅವರು ದೂರಿನ ಸಂಬಂಧ ವಿಚಾರಣೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ.ಟ
ನಾನು ಧರ್ಮಸ್ಥಳ ಮಂಜುನಾಥನ ಮೇಲಾಣೆ ಬೆದರಿಕೆ ಹಾಕಿಲ್ಲ
ಬೆಂಗಳೂರು: ನಾನು ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡಿ ಹೇಳುತ್ತೇನೆ ಬಿಜೆಪಿ ಶಾಸಕ ಕೆ.ಗೋಪಾಲಯ್ಯಗೆ ಬೆದರಿಕೆ ಹಾಕಿಲ್ಲ. ಕೊಟ್ಟ ಹಣ ವಾಪಾಸ್ ಕೇಳುವ ವೇಳೆಯಲ್ಲಿ ವಾಗ್ವಾದ ಆಗಿದೆ ಎಂಬುದಾಗಿ ಮಾಜಿ ಕಾರ್ಪೋರೇಟರ್ ಪದ್ಮರಾಜ್ ಸ್ಪಷ್ಟ ಪಡಿಸಿದ್ದಾರೆ.
ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ಪ್ರತಿಕ್ರಿಯಿಸಿದಂತ ಅವರು, ನಾನು ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡುತ್ತೇನೆ. ಕೆ.ಗೋಪಾಲಯ್ಯ ಅವರಿಗೆ ಜೀವ ಬೆದರಿಕೆ ಹಾಕಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಗುತ್ತಿಗೆ ಕೊಡಿಸುವ ವಿಚಾರಕ್ಕೆ ನಾನು 15 ಲಕ್ಷ ಹಣ ಕೊಟ್ಟಿದ್ದೆನು. ಕೆಲಸ ಕೊಡಿಸಲಿಲ್ಲ. ಆಗ ಕಾಲ್ ಮಾಡಿದಾಗ ಸ್ವಲ್ಪ ಮಾತು ಆಗಿದೆ. ಅದರ ಹೊರತಾಗಿ ಅವರಿಗೆ ನಾನು ಯಾವುದೇ ಜೀವ ಬೆದರಿಕೆ ಹಾಕಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
BREAKING: ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಕೈ ಅಭ್ಯರ್ಥಿಗಳ ಪಟ್ಟಿ ಪ್ರಕಟ | Rajya Sabha Election 2024
1056 ಖಾಲಿ ಹುದ್ದೆಗಳ ಭರ್ತಿಗೆ ‘UPSC’ ಅಧಿಸೂಚನೆ ಬಿಡುಗಡೆ : ಅರ್ಜಿ ಸಲ್ಲಿಕೆಗೆ ‘ಡೈರೆಕ್ಟ್ ಲಿಂಕ್’ ಇಲ್ಲಿದೆ