ಬೆಂಗಳೂರು : ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿ:01-04-2006ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ನಿರ್ದಿಷ್ಟ ಪಿಂಚಣಿ ಬಿಡುಗಡೆ ಕುರಿತಂತೆ ಶಾಲಾ ಶಿಕ್ಷಣ ಇಲಾಖೆ ಯಿಂದ ಮಹತ್ವದ ಆದೇಶವನ್ನು ಹೊರಡಿಸಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ(1)ರ ಪತ್ರದಲ್ಲಿ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿ:01-04-2006ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನಾ ವ್ಯಾಪ್ತಿಗೆ ಒಳಪಡಿಸುವ ಕುರಿತು ಅನುಬಂಧದಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ದೇಶನವಾಗಿರುತ್ತದೆ.
ಅದರಂತೆ ಸದರಿ ಮಾಹಿತಿಯು ಅನುಬಂಧ-01 ರಲ್ಲಿ ಸಲ್ಲಿಸಲು ವಿಭಾಗದ ಎಲ್ಲಾ ಉಪನಿರ್ದೇಶಕರು(ಆಡಳಿತ) ರವರಿಗೆ ಉಲ್ಲೇಖ(2)ರನ್ವಯ ತಿಳಿಸಲಾಗಿತ್ತು.
ಉಲ್ಲೇಖಿತ(3)ರ ಪತ್ರದಲ್ಲಿ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರ ಆಪ್ತ ಕಾರ್ಯದರ್ಶಿ ರವರ ದಿನಾಂಕ:18-12-2023ರ ಟಿಪ್ಪಣಿ ಮತ್ತು ಅದರ ಅಡಕಗಳನ್ನು ಇದರೊಡನೆ ಲಗತ್ತಿಸಿ. ಉಲ್ಲೇಖಿತ(4) ರನ್ವಯ ದಿನಾಂಕ:01-04-2006ರ ಪೂರ್ವದಲ್ಲಿ ನೇಮಕವಾಗಿದ್ದು ದಿನಾಂಕ:01-04-2006ರ ನಂತರ ವೇತನಾನುದಾನಕ್ಕೆ ಒಳಪಟ್ಟು ನಿವೃತ್ತರಾಗಿರುವ/ಮರಣಹೊಂದಿರುವ /ಹಾಲಿ ಸೇವೆಯಲ್ಲಿದ್ದು ಮುಂದೆ ನಿವೃತ್ತರಾಗಿರುವ ಅನುದಾನಿತ ಪಿಂಚಣಿ ವಂಚಿತ ಶಿಕ್ಷಕ ನಿಶ್ಚಿತ ಪಿಂಚಣಿ ಅಥವಾ ನಿರ್ದಿಷ್ಟ ಪಿಂಚಣಿ ಬಿಡುಗಡೆ ಮಾಡುವಂತೆ ಕೋರಿರುವ ಬಗ್ಗೆ ನಿಯನಾನುಸಾರ ಪರಿಶೀಲಿಸಲು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಾಪ್ಟ್ ಪ್ರತಿಯನ್ನು ಇ-ಮೇಲ್ ವಿಳಾಸಕ್ಕೆ ಮತ್ತು ಹಾರ್ಡ ಪ್ರತಿಯನ್ನು ಕೊಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ಮಾನ್ಯ ಸರ್ಕಾರದಿಂದ ನಿರ್ದೇಶನವಾಗಿರುತ್ತದೆ.
ಅದರಂತೆ ಉಲ್ಲೇಖಿತ(5)ರಪತ್ರದಲ್ಲಿ ಮಾನ್ಯ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ರವರ ಅನುಬಂಧ-01.ಅನುಬಂಧ-02 ಮತ್ತು ಅನುಬಂಧ-03 ರಲ್ಲಿ ತಮ್ಮ ಆಯುಕ್ತಾಲಯದ ವ್ಯಾಪ್ತಿಯಲ್ಲಿನ ಜಿಲ್ಲಾವಾರು ಕ್ರೋಢೀಕೃತ ಮಾಹಿತಿಯನ್ನು ನೇರವಾಗಿ ಸರ್ಕಾರಕ್ಕೆ ಸಲ್ಲಿಸಲು ಕೋರಿದ್ದಾರೆ.