ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಫೆಬ್ರವರಿ.16ರಂದು ಚುನಾವಣೆ ಘೋಷಣೆ ಮಾಡಲಾಗಿದೆ. ಚುನಾವಣೆಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರದಲ್ಲಿ 48 ಗಂಟೆ ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳ ಕ್ರಮ ಪ್ರಶ್ನಿಸಿ ಇದೀಗ ಹೋಟೆಲ್ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಹೈಕೋರ್ಟ್ ಗೆ ಬೆಂಗಳೂರು ಹೋಟೇಲ್ ಮಾಲೀಕರ ಸಂಘದಿಂದ ಅರ್ಜಿಯನ್ನು ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳು 48 ಗಂಟೆ ಮಧ್ಯ ಮಾರಾಟ ನಿಷೇಧ ಮಾಡಿ ಹೊರಡಿಸಿರುವಂತ ಆದೇಶವನ್ನು ಪ್ರಶ್ನಿಸಿದ್ದಾರೆ.
ಹೈಕೋರ್ಟ್ ಗೆ ಸಲ್ಲಿಸಿರುವಂತ ಅರ್ಜಿಯಲ್ಲಿ ಕೇವಲ 16 ಸಾವಿರ ಶಿಕ್ಷಕ ಮತದಾರರು ಚುನಾವಣೆಯಲ್ಲಿ ಭಾಗಿಯಾಗಿದ್ದಾರೆ. ಮದ್ಯ ಮಾರಾಟ ಮಾಡುವುದರಿಂದ ವರ್ತಕರು, ಹೋಟೆಲ್ ಗಳಿಗೆ ಕುತ್ತು ಬಂದು ಸಮಸ್ಯೆ ಉಂಟಾಗಲಿದೆ. 48 ಗಂಟೆಗಳ ಅವಧಿಗೆ ಮಧ್ಯ ಮಾರಾಟ ನಿಷೇಧ ಅನಗತ್ಯವೆಂದು ಮನವಿ ಮಾಡಲಾಗಿದೆ.
ಹೋಟೆಲ್ ಮಾಲೀಕರು ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ನಾಳೆಯೊಳಗೆ ಸರ್ಕಾರ ಪ್ರತಿಕ್ರಿಯಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿದೆ.
ನೀರಾವರಿ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಮೊದಲ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್