ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ, ಸದ್ದಿಲ್ಲದಂತೆ ಮದ್ಯದ ದರ ಹೆಚ್ಚಳ ಮಾಡಲಾಗಿತ್ತು. ಈಗ 200 ಯೂನಿಟ್ ಉಚಿತ ವಿದ್ಯುತ್ ಕೊಟ್ಟು, ಬೆಂಗಳೂರಲ್ಲಿ ನೀರಿನ ಬಿಲ್ ಹೆಚ್ಚಳಕ್ಕೆ ಚಿಂತನೆ ನಡೆಸಿರೋ ಸುಳಿವನ್ನು ಸ್ವತಹ ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿದ್ದಾರೆ.
ಈ ಕುರಿತಂತೆ ವಿಧಾನಸಭೆಯಲ್ಲಿ ಮಂಗಳವಾರದಂದು ಸದಸ್ಯ ಸಿ.ಕೆ ರಾಮಮೂರ್ತಿ ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಬೆಂಗಳೂರಿನಲ್ಲಿ ಜಲಮಂಡಳಿಯ ನೀರಿನ ದರ ಹೆಚ್ಚಳವಾಗದ ಬಗ್ಗೆ ಪ್ರಸ್ತಾಪ ಮಾಡಿದರು. ಕಳೆದ 11 ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡಲು ಆಗಿಲ್ಲ. ಆದ್ರೇ ರಾಜ್ಯದಲ್ಲಿ ಪ್ರತಿ ವರ್ಷ ವಿದ್ಯುತ್ ದರ ಹೆಚ್ಚಾಗುತ್ತಲೇ ಇದೆ ಎಂದರು.
ರಾಜಧಾನಿ ಬೆಂಗಳೂರಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಕುಡಿಯುವ ನೀರಿಗೂ ತೀವ್ರ ಬೇಡಿಕೆ ಉಂಟಾಗುತ್ತಿದೆ. ವಿವಿಧ ಕಾರಣಕ್ಕಾಗಿ ನೀರಿನ ದರವನ್ನು ಹೆಚ್ಚಳ ಮಾಡಲಾಗಿಲ್ಲ. ಬೆಂಗಳೂರಲ್ಲಿ ಶೇ.20ರಷ್ಟು ನೀರಿನ ಅಗತ್ಯವನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ನೀರಿನ ದರ ಹೆಚ್ಚಳಕ್ಕೂ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿರೋದಾಗಿ ತಿಳಿಸಿದರು.