ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಿಇಟಿ-24ಕ್ಕೆ ಸಲ್ಲಿಸಿದ ಅರ್ಜಿಗಳ ತಿದ್ದುಪಡಿ ಸಂಬಂಧ ಕೆಲ ಮಾದರಿ ಹಾಗೂ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವವರು ಫೆಬ್ರವರಿ 10ರಿಂದ ಅರ್ಜಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯತೆ, ವಿಳಾಸ, ಬ್ಯಾಂಕ್ ಮಾಹಿತಿ, ಮೀಸಲಾತಿ, ಆರ್.ಡಿ.ಸಂಖ್ಯೆ, ಅಪ್ಲೋಡ್ ಮಾಡಿರುವ ದಾಖಲಾತಿಗಳು, ಆಯ್ಕೆ ಮಾಡಿರುವ ಕೋರ್ಸ್ಗಳು, ಪರೀಕ್ಷಾ ಕೇಂದ್ರಗಳು, ಪಿಯುಸಿ ರಿಜಿಸ್ಟರ್ ಸಂಖ್ಯೆಯನ್ನು ತಿದ್ದುಪಡಿ ಮಾಡಬಹುದಾಗಿದೆ.
ಇನ್ನೂ ಸಂಚಾರ ಜಾಗೃತಿ ನಿಯಮದ ಕುರಿತು ಶಾಲೆ ಪಠ್ಯದಲ್ಲಿ ಪಾಠ ಸೇರಿಸುವ ಕೆಲಸ ಶುರು ಮಾಡಲಾಗಿದೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಪಾಠ ಸಿದ್ಧಪಡಿಸಿ, ಡಿಎಸ್ಇಆರ್ಟಿಗೆ ಸಲ್ಲಿಸಲಾಗಿದೆ. ಅವರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮುಂದಿನ ವರ್ಷವೇ ಪಠ್ಯದಲ್ಲಿ ಪಾಠ ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.