ಬೆಂಗಳೂರು: ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮುನ್ನ ಕೊಟ್ಟಿದ್ದ ಮಾತಿನಂತೆ ಐದೂ ಗ್ಯಾರಂಟಿಗಳನ್ನು ಈಡೇರಿಸಿದ್ದು, ನಮ್ಮ ನಡೆ-ನುಡಿ ಎರಡೂ ಒಂದಾಗಿದೆ. ಬಜೆಟ್ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲರು ಮಾಡಿದ ಭಾಷಣದಲ್ಲಿ ಇದನ್ನೇ ಹೇಳಲಾಗಿದೆ. ನಮ್ಮ ವಿರುದ್ಧ ಮಾತನಾಡುತ್ತಿರುವ ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಎದುರೇಟು ನೀಡಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ದಿನ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣವನ್ನು ಬಿಜೆಪಿ ಟೀಕಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅವರು ಹೀಗೆ ಖಾರವಾಗಿ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷವು ಮಾತು ಮತ್ತು ಕೃತಿಗಳಲ್ಲಿ ಸದಾ ಒಂದಾಗಿದೆ. ಆದರೆ ಬಿಜೆಪಿ ಇದಕ್ಕೆ ತದ್ವಿರುದ್ಧವಾಗಿದೆ. ತಾವು ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನೆಲ್ಲ ವಾಪಸ್ ತಂದು ಒಬ್ಬೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುತ್ತೇವೆಂದರು; ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಮಾತುಗಳನ್ನಾಡಿದರು; ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿಕೊಂಡು ಬಂದರು. ಆದರೆ, ಈ ಭರವಸೆಗಳ ಗತಿ ಏನಾಯಿತು ಎಂದು ಅವರು ಸವಾಲೆಸೆದರು.
ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಕೇಂದ್ರದ ಅಧಿಕಾರಿಗಳು ಬಂದು ವರದಿ ಸಲ್ಲಿಸಿದ್ದು ಕೂಡ ಹಳೆಯ ಮಾತಾಯಿತು. ಆದರೆ, ಕೇಂದ್ರದ ಬಿಜೆಪಿ ಸರಕಾರವು ಇಲ್ಲಿಯವರೆಗೂ ನಮಗೆ ಎನ್.ಡಿ.ಆರ್.ಎಫ್ ಅಡಿಯಲ್ಲಿ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಜೊತೆಗೆ ಈ ಪರಿಹಾರ ಹಣದ ಪ್ರಮಾಣವನ್ನು ಶೇ.10ರಷ್ಟು ಹೆಚ್ಚಿಸುವಂತೆ ಕೇಳಿಕೊಂಡೆವು. ಅದಕ್ಕೂ ಬಿಜೆಪಿ ಕಿವುಡಾಗಿದೆ. ಇನ್ನೊಂದೆಡೆಯಲ್ಲಿ ನಾವು ನಮ್ಮ ರೈತರಿಗೆ ಎಕರೆಗೆ 2,000 ರೂ.ಗಳಂತೆ ಪರಿಹಾರ ಕೊಟ್ಟಿದ್ದೇವೆ ಎಂದು ಅವರು ಹರಿಹಾಯ್ದರು.
ಬಿಜೆಪಿಯವರು ಕೇಸರಿ ಶಾಲು ಹಾಕಿಕೊಂಡು ಸದನದೊಳಕ್ಕೆ ಬಂದು, ಪ್ರಚೋದನಕಾರಿ ರೀತಿಯಲ್ಲಿ ವರ್ತಿಸಿದ್ದಾರೆ. ಅವರು ಬರೀ ಜೈ ಶ್ರೀರಾಮ್ ಎನ್ನುತ್ತಾರೆ. ನಾವು ರಾಮನ ಜೊತೆಗೆ ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ ಎಲ್ಲರಿಗೂ ಜೈಕಾರ ಹಾಕುತ್ತೇವೆ. ನಮ್ಮ ಮನೆಗಳಲ್ಲಿ, ಲಿಂಗಾಯತ ಮಠಗಳಲ್ಲಿ ಮೊದಲಿನಿಂದಲೂ ಕೇಸರಿ ವಸ್ತ್ರದ ಉಪಯೋಗವಿದೆ. ಕೇಸರಿ ಶಾಲುವೇನೂ ಬಿಜೆಪಿಯ ಸ್ವತ್ತಲ್ಲ ಎಂದು ಪಾಟೀಲ ನುಡಿದರು.
ಶಿವಮೊಗ್ಗ: ಮೂಲಭೂತ ಸೌಕರ್ಯದೊಂದಿಗೆ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವುದು ಅತ್ಯಗತ್ಯ- CEO ಸ್ನೇಹಲ್
BIG NEWS: ರಾಜ್ಯದ ಸರ್ಕಾರಿ ಕಚೇರಿಯಲ್ಲಿ ‘ಬಸವಣ್ಣ’ನ ಭಾವಚಿತ್ರ ಹಾಕುವುದು ಕಡ್ಡಾಯ – ಸಿಎಂ ಸಿದ್ಧರಾಮಯ್ಯ ಆದೇಶ