ಬೆಂಗಳೂರು: ರಾಜ್ಯ ಸರ್ಕಾರ ಫೆಬ್ರವರಿ 1ರಿಂದ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 185ರಿಂದ 195ಕ್ಕೆ ಏರಿಸಿ ಮದ್ಯಪ್ರಿಯರ ಕಿಸಿಗೆ ಕೈ ಹಾಕಲು ಮಂದಾಗಿತ್ತು. ಆದರೆ ಈಗ ರಾಜ್ಯ ಸರ್ಕಾರಕ್ಕೆ ಮದ್ಯಪ್ರಿಯರೇ ಶಾಕ್ ಕೊಟ್ಟಿದ್ದಾರೆ.
ಹೌದು, ಫೆಬ್ರವರಿ 1ರಂದು ಎಇಡಿ ಹೆಚ್ಚಳದ ನಂತರ ಬಿಯರ್ ಮಾರಾಟದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ. ಈ ನಡುವೆ ಗಿ ಪ್ರತಿ ಬಾಟಲಿ ಬಿಯರ್ ದರವು ಕನಿಷ್ಠ 8 ರೂ.ಗಳಿಂದ ಗರಿಷ್ಠ 15 ರೂ.ವರೆಗೆ ಹೆಚ್ಚಳವಾಗಿದೆ. ಹೀಗಾಗಿ ಮದ್ಯಪ್ರಿಯರು ಬಿಯರ್ ಖರೀದಿಗೆ ನಿರಾಸಕ್ತಿ ತೋರಿದ್ದರಿಂದ ರಾಜ್ಯದೆಲ್ಲೆಡೆ ಫೆಬ್ರವರಿ 1ರಿಂದಲೂ ಬಿಯರ್ ಮಾರಾಟದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ. ಹಲವು ಮದ್ಯ ಪ್ರಿಯರು ಕಡಿಮೆ ಬೆಲೆಯ ಬಿಯರ್ ಬ್ರ್ಯಾಂಡ್ಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೆ ಕೆಲ ಮದ್ಯಪ್ರಿಯರು ಬಿಯರ್ ಖರೀದಿ ಪ್ರಮಾಣ ಕಡಿಮೆ ಮಾಡಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ದುಬಾರಿ ಬ್ರ್ಯಾಂಡ್ಗಳ ಬಿಯರ್ಗಳಿಗೆ ಮೊದಲಿದ್ದಂತೆ ಬೇಡಿಕೆ ಇಲ್ಲ. ಬಹುತೇಕ ಕಡಿಮೆ ಬೆಲೆಯ ಬಿಯರ್ಗಳನ್ನು ಕೊಂಡುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.