ಬೆಂಗಳೂರು: ನಾನು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ಇದನ್ನು ಈ ಹಿಂದೆಯೂ ನಾನು ಹೇಳಿದ್ದೇನೆ. ಜೊತೆಗೆ ಯೂ ಟರ್ನ್ ಹೊಡೆಯೋ ಗಿರಾಕಿ ಅಲ್ಲ ಅಂತ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದಂತ ಅವರು, ನಾನು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. 2019ರಲ್ಲಿ ಅಭ್ಯರ್ಥಿಯಾಗಿ ನಿಂತು ಸೋತಿದ್ದೇನೆ. ನನ್ನನ್ನು ಈಗಲೂ ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಯೂ ಟರ್ನ್ ಹೊಡೆಯಲ್ಲ. ನನ್ನ ನಿರ್ಧಾರ ಸ್ಪಷ್ಟವಾಗಿದೆ ಎಂದರು.
ನನ್ನನ್ನು ಮಂಡ್ಯ ಮುಂಖಡರು ನೀವು ಬರಬೇಕು. ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣ ನಾನು ಮಂಡ್ಯ ಭಾಗದಲ್ಲಿ ಒಡಾಡಿದ್ದು ಆಗಿದೆ. ಮತ್ತೆ ಮೋದಿ ಪ್ರಧಾನಿ ಆಗಬೇಕು. ನಮ್ಮ ಗಮನ ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲೋ ಕಡೆಯೋದು ಆಗಿದೆ ಎಂದರು.
‘ಅಮಿತ್ ಶಾ’ ಉಪಸ್ಥಿತಿಯಲ್ಲಿ ‘ಲೋಕಸಭಾ ಚುನಾವಣೆ’ ಕಾರ್ಯತಂತ್ರದ ಚರ್ಚೆ- ಬಿ.ವೈ.ವಿಜಯೇಂದ್ರ
ಲೋಕಸಭಾ ಚುನಾವಣೆ 2024 : ಹೈಕಮಾಂಡ್ ಭೇಟಿ ಬಳಿಕ ಮಾಜಿ ಸಚಿವ ವಿ.ಸೋಮಣ್ಣ ಫುಲ್ ಆಕ್ಟಿವ್