ಹಾವೇರಿ: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹಾಲು, ಮೊಸರು ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳು ಗಗನಕ್ಕೇರುತ್ತಿವೆ. ಇದರ ನಡುವೆ ಸಕ್ಕರೆ ದರ ಕೂಡ ಹೆಚ್ಚಳ ಆಗೋ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದ್ರೇ ರಾಜ್ಯದ ಜನರಿಗೆ ನೆಮ್ಮದಿಯ ಸುದ್ದಿ ಎನ್ನುವಂತೆ ಸದ್ಯಕ್ಕೆ ಸಕ್ಕರೆ ಬೆಲೆ ಏರಿಕೆಯಿಲ್ಲ ಅಂತ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು ಸದ್ಯದ ಪರಿಸ್ಥಿತಿಯಲ್ಲಿ ಸಕ್ಕರೆ ದರದಲ್ಲಿ ಏರಿಕೆ ಇಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ 55 ರೂ ಇದೆ. ಲೋಕಸಭಾ ಚುನಾವಣೆ ಕಾರಣಕ್ಕೆ ದರ 34ಕ್ಕೆ ನಿಂತಿದೆ ಎಂದರು.
ಕೇಂದ್ರ ಸರ್ಕಾರ ಏಕಾಏಕಿ ಎಥೆನಾಲ್ ನೀತಿ ಜಾರಿಗೊಳಿಸಿರುವ ಪರಿಣಾಮ ಸಕ್ಕರೆ ಧಾರಣೆ ಏರುತ್ತಿಲ್ಲ ಎನ್ನುವುದೇ ದೇಶದ ದುರ್ದೈವ ಎಂಬುದಾಗಿ ವಿಷಾದಿಸಿದರು.
BIG NEWS: ಒಂದೇ ಕಾಮಗಾರಿಗೆ ಎರಡು ಬಿಲ್: ಪಂಚಾಯತ್ ರಾಜ್ ಇಲಾಖೆಯ ಮೂವರು ಸಿಬ್ಬಂದಿ ಅಮಾನತು
ಲೋಕಸಭಾ ಚುನಾವಣೆ 2024 : ಹೈಕಮಾಂಡ್ ಭೇಟಿ ಬಳಿಕ ಮಾಜಿ ಸಚಿವ ವಿ.ಸೋಮಣ್ಣ ಫುಲ್ ಆಕ್ಟಿವ್