ನವದೆಹಲಿ : ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಸುಮಾರು 97 ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಚುನಾವಣಾ ಆಯೋಗ ಇಂದು (ಫೆಬ್ರವರಿ 8) ತಿಳಿಸಿದೆ. 18 ರಿಂದ 29 ವರ್ಷ ವಯಸ್ಸಿನ ಎರಡು ಕೋಟಿಗೂ ಹೆಚ್ಚು ಯುವ ಮತದಾರರನ್ನ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅದು ಹೇಳಿದೆ.
ಕಳೆದ ಲೋಕಸಭಾ ಚುನಾವಣೆ ನಡೆದ 2019 ಕ್ಕೆ ಹೋಲಿಸಿದರೆ ನೋಂದಾಯಿತ ಮತದಾರರಲ್ಲಿ ಶೇಕಡಾ 6 ರಷ್ಟು ಹೆಚ್ಚಳವಾಗಿದೆ.
96.88 crore people registered to vote for the forthcoming General Elections in India: ECI pic.twitter.com/xsD0YSmXIw
— ANI (@ANI) February 9, 2024
“ವಿಶ್ವದ ಅತಿದೊಡ್ಡ ಮತದಾರರು- 96.88 ಕೋಟಿ ಜನರು ಭಾರತದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ” ಎಂದು ಚುನಾವಣಾ ಆಯೋಗ ತಿಳಿಸಿದೆ. ಲಿಂಗಾನುಪಾತವು 2023 ರಲ್ಲಿ 940 ರಿಂದ 2024 ರಲ್ಲಿ 948 ಕ್ಕೆ ಏರಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಮತ್ತು ಬಹಿರಂಗಪಡಿಸುವಿಕೆಯ ಜೊತೆಗೆ ಮತದಾರರ ಪಟ್ಟಿಯ ಶುದ್ಧತೆ ಮತ್ತು ಆರೋಗ್ಯಕ್ಕೆ ಆಯೋಗವು ವಿಶೇಷ ಒತ್ತು ನೀಡಿದೆ ಎಂದು ಅಧಿಕಾರಿಯೊಬ್ಬರು ಗಮನಸೆಳೆದರು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಪುಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಒಳಗೊಂಡಿರುವ ವಿವಿಧ ಕಾರ್ಯಗಳನ್ನ ಮತ್ತು ಪ್ರತಿ ಹಂತದಲ್ಲೂ ರಾಜಕೀಯ ಪಕ್ಷಗಳ ಭಾಗವಹಿಸುವಿಕೆಯನ್ನ ವಿವರಿಸಿದರು.
‘ಪತ್ನಿಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ’ : ತಂದೆಯ ಆರೋಪ ತಳ್ಳಿಹಾಕಿದ ‘ಜಡೇಜಾ’
ಶಿವಮೊಗ್ಗ: ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut