ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಾರಾಂಶ’ ಚಿತ್ರದ ಹಾಡುಗಳು ಈಗಾಗಲೇ ವೈರಲ್ ಆಗಿದೆ. ಈ ನಡುವೆ ಇದೀಗ ನಿರ್ದೇಶಕ ಸೂರ್ಯ ವಸಿಷ್ಠ ಹಾಗೂ ಉದಿತ್ ಸಹಯೋಗದ ಮತ್ತೊಂದು ಮೆಲೋಡಿಯಸ್ ಹಾಡು ಬಿಡುಡೆಯಾಗಿದ್ದು, ಎಲ್ಲ ಮನ ಗೆಲ್ಲುತ್ತಿದೆ. ತೀರದಾಚೆಗೆ ಹಾರಿ ಹೋಗುವಾಸೆ ಅಂತ ಶುರುವಾಗುವ ಈ ಹಾಡು ಸಾಹಿತ್ಯ ಸಂಗೀತದ ಹದವಾದ ಸಂಯೋಗದೊಂದಿಗೆ ಸಂಗೀತರ ಮನ ಗೆಲ್ಲುವುದಕ್ಕೆ ಮುಂದಾಗಿದೆ.
ನಿರ್ದೇಶಕ ಸೂರ್ಯ ವಸಿಷ್ಠ ಬರೆದಿರುವ ಸಾಹಿತ್ಯಕ್ಕೆ ಪಂಚಮ್ ಅವರು ಧ್ವನಿಯಾಗಿದ್ದಾರೆ. ಧಾರಾವಾಹಿ, ಸಿನಿಮಾಗಳ ಮೂಲಕ ನಟರಾಗಿದ್ದ ಸೂರ್ಯ ವಸಿಷ್ಠ `ಸಾರಾಂಶ’ದ ಮೂಲಕ ನಿರ್ದೇಶಕರಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಭರಸವಸೆ ಮೂಡಿಸಿದ್ದಾರೆ. ಇದಲ್ಲದೇ ಸೂರ್ಯ ವಸಿಷ್ಠ ಹಾಗೂ ಶೃತಿ ಹರಿಹರನ್ ಕಾಂಬಿನೇಷನ್ನಿನ ಈ ಹಾಡು, ಸಾರಾಂಶದ ದೃಷ್ಯಗಳ ಅಸಲೀ ಮೋಡಿಯ ಪರಿಚಯವನ್ನೂ ಮಾಡಿಸಿದೆ. ಅಂಧ ಹಾಗೇ ಇದೇ ಫೆಬ್ರವರಿ 15ರಂದು ಸಿನಿಮಾ ಬಿಡುಗಡೆಯಾಗಲಿದೆ.
ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಕೊಂಡಿದ್ದಾರೆ.