ಮಂಡ್ಯ: ಜಿಲ್ಲೆಯಲ್ಲಿ ಹೊರಗಿನವರು ಬಂದು ಯಾಕೆ ಚುನಾವಣೆಗೆ ಸ್ಪರ್ಧಿಸಬೇಕು.? ಮಂಡ್ಯದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸುವ ಗಂಡಸರು ಇಲ್ವ ಅಂತ ಶಾಸಕ ಕದಲೂರು ಉದಯ್ ವಾಗ್ಧಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮಂಡ್ಯದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸುವ ಗಂಡಸರು ಇಲ್ವ? ಯಾಕೆ ಬೇರೆ ಯಾವುದೋ ಜಿಲ್ಲೆಯವರು ಬರಬೇಕು.? ಎಂದು ಪ್ರಶ್ನಿಸಿದರು.
ನಮ್ಮದೇ ಜಿಲ್ಲೆಯವರು ನಿಲ್ಲಬೇಕು. ಜೆಡಿಎಸ್ ಪಕ್ಷದಲ್ಲಿ ಸಮರ್ಥ ಕಾರ್ಯಕರ್ತರಿಲ್ವ? ನಾಯಕರ ಮಕ್ಕಳು, ಕುಟುಂಬಸ್ಥರೇ ಸ್ಪರ್ಧಿಸಬೇಕಾ? ಐದು ವರ್ಷದಿಂದ ನಿಖಿಲ್ ಎಲ್ಲಿ ಹೋಗಿದ್ದರು.? ಜನ ಸೇವೆ ಮಾಡೋರು ನಿರಂತವಾಗಿ ಇರಬೇಕು. ಚುನಾವಣೆ ಬಂದಾಗ ಬರೋಕೆ ಜನ ದಡ್ಡರು ಅಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದರು.