ಬೆಂಗಳೂರು: ಹಳಿ ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ನೈರುತ್ಯ ರೈಲ್ವೆಯಿಂದ ವಿವಿಧ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
I. ಹಳಿ ನಿರ್ವಹಣಾ ಕಾಮಗಾರಿ: ರೈಲುಗಳ ಭಾಗಶಃ ರದ್ದು
ದೇವನೂರು, ಬಳ್ಳೇಕೆರೆ ಹಾಲ್ಟ್ ಮತ್ತು ಬೀರೂರು ನಿಲ್ದಾಣದ ಯಾರ್ಡ್ ಗಳಲ್ಲಿ ಅಗತ್ಯ ಹಳಿ ನಿರ್ವಹಣಾ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಪಡಿಸಲಾಗುತ್ತಿದೆ.
1. ಫೆಬ್ರವರಿ 12, 20, 25, ಮಾರ್ಚ್ 4, 11, 18, 25 ಮತ್ತು ಏಪ್ರಿಲ್ 1, 2024 ರಂದು ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್ ಪ್ರೆಸ್ ರೈಲು ಬೀರೂರು ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಅರಸೀಕೆರೆ ನಿಲ್ದಾಣದ ಬದಲು ಬೀರೂರು ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.
2. ಫೆಬ್ರವರಿ 13, 21, 26, ಮಾರ್ಚ್ 5, 12, 19, 26 ಮತ್ತು ಏಪ್ರಿಲ್ 2, 2024 ರಂದು ರೈಲು ಸಂಖ್ಯೆ 16213 ಅರಸೀಕೆರೆ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲು ಅರಸೀಕೆರೆ-ಬೀರೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಅರಸೀಕೆರೆಯ ಬದಲು ಬೀರೂರು ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಪ್ರಾರಂಭವಾಗಲಿದೆ.
II. ಜೋಡಿ ಮಾರ್ಗ ಕಾಮಗಾರಿ: ರೈಲುಗಳ ಭಾಗಶಃ ರದ್ದು
ತಿರುನೆಲ್ವೇಲಿ-ಮೇಲಪ್ಪಲೈಯಂ ಭಾಗದಲ್ಲಿ ನಡೆಯುತ್ತಿರುವ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು ಮಾಡಲು ದಕ್ಷಿಣ ರೈಲ್ವೆ ವಲಯವು ಸೂಚಿಸಿದೆ, ಅವುಗಳ ವಿವರಗಳು ಈ ಕೆಳಗಿನಂತಿವೆ.
1. ಫೆಬ್ರವರಿ 14 ರಿಂದ 19, 2024 ರವರೆಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17235 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ನಾಗರಕೋಯಿಲ್ ಡೈಲಿ ಎಕ್ಸ್ ಪ್ರೆಸ್ ರೈಲು ದಿಂಡಿಗಲ್-ನಾಗರಕೋಯಿಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ನಾಗರಕೋಯಿಲ್ ನಿಲ್ದಾಣದ ಬದಲು ದಿಂಡಿಗಲ್ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.
2. ಫೆಬ್ರವರಿ 15 ರಿಂದ 20, 2024 ರವರೆಗೆ ನಾಗರಕೋಯಿಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17236 ನಾಗರಕೋಯಿಲ್-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ರೈಲು ನಾಗರಕೋಯಿಲ್-ದಿಂಡಿಗಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ನಾಗರಕೋಯಿಲ್ ನಿಲ್ದಾಣದ ಬದಲು ದಿಂಡಿಗಲ್ ನಿಲ್ದಾಣದಿಂದ ಪ್ರಾರಂಭವಾಗಲಿದೆ.
3. ಫೆಬ್ರವರಿ 17, 2024 ರಂದು ದಾದರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11021 ದಾದರ್- ತಿರುನೆಲ್ವೇಲಿ ಎಕ್ಸ್ ಪ್ರೆಸ್ ರೈಲು ವಿರುಡುನಗರ-ತಿರುನೆಲ್ವೇಲಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ತಿರುನೆಲ್ವೇಲಿ ನಿಲ್ದಾಣದ ಬದಲು ವಿರುಡುನಗರದಲ್ಲಿ ಕೊನೆಗೊಳ್ಳುತ್ತದೆ.
4. ಫೆಬ್ರವರಿ 19, 2024 ರಂದು ತಿರುನೆಲ್ವೇಲಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11022 ತಿರುನೆಲ್ವೇಲಿ-ದಾದರ್ ಎಕ್ಸ್ ಪ್ರೆಸ್ ರೈಲು ತಿರುನೆಲ್ವೇಲಿ-ವಿರುಡುನಗರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ತಿರುನೆಲ್ವೇಲಿ ನಿಲ್ದಾಣದ ಬದಲು ವಿರುಡುನಗರ ನಿಲ್ದಾಣದಿಂದ ಪ್ರಾರಂಭವಾಗಲಿದೆ.
BIG NEWS: ರಾಜ್ಯ ಸರ್ಕಾರಿ ನೌಕರರಿಗೆ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ'(CLT) ಬಗ್ಗೆ ಮಹತ್ವದ ಮಾಹಿತಿ
BREAKING : ದೆಹಲಿ ಮದ್ಯ ಹಗರಣ : ಫೆ.17ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ‘ಸಿಎಂ ಕೇಜ್ರಿವಾಲ್’ಗೆ ಕೋರ್ಟ್ ಸಮನ್ಸ್