ಕುಂದಾಪುರ: ಬೈಂದೂರು ತಾಲೂಕಿನ ಮೂದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಹಸಿರು ಬಣ್ಣದ ಸಮವಸ್ತ್ರ ಧರಿಸಿ ಶಸ್ತ್ರಸಜ್ಜಿತ ತಂಡ ಕೆಲವು ಮನೆಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಚ್ಚರ ವಹಿಸಿದೆ ಎನ್ನಲಾಗಿದೆ.
ಎರಡು ತಿಂಗಳುಗಳಿಂದ ಈ ಪರಿಸರಗಳಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿರುವ ಶಂಕೆಯಿದ್ದು, ನಾಲ್ವರನ್ನು ಒಳಗೊಂಡ ತಂಡ ಹಲವು ಮನೆಗಳಿಗೆ ಭೇಟಿ ನೀಡುತ್ತಿದೆ ಎನ್ನಲಾಗಿದೆ. ಯೂನಿಫಾರಂ ಹಾಕಿದ ನಾಲ್ವರಿದ್ದ ತಂಡ ಈ ಪರಿಸರದ ಕೆಲವು ಮನೆಗಳಿಗೆ ಭೇಟಿ ಮಾಡಿದೆ. ನಾಲ್ವರ ಪೈಕಿ ಇಬ್ಬರಲ್ಲಿ ಶಸ್ತ್ರಾಸ್ತ್ರಗಳಿದ್ದವು ಎನ್ನಲಾಗಿದೆ. ಕೆಲವು ಮನೆಯವರು ನಕ್ಸಲರ ಭೇಟಿಗೆ ಅವಕಾಶ ನೀಡಿಲ್ಲ. ಕೆಲವು ಮನೆಯವರ ಬಳಿ ರಾತ್ರಿ ವೇಳೆ ಕಿಟಕಿಯಿಂದಷ್ಟೇ ಮಾತಾಡಿ ಹೋಗಿದ್ದಾರೆ. ಎರಡು ದಿನಗಳ ಹಿಂದೆಯೂ ಕೆಲವು ಮನೆಗಳಿಗೆ ಇವರು ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
(ಸಂಗ್ರಹಚಿತ್ರ)