ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮದುವೆಯಾದ ನಂತರ ಹುಡುಗಿಯರ ತೂಕ ಹೆಚ್ಚಾಗುವ ಹಾಗೇ ಗಂಡಸರ ತೂಕ ಸಹ ಹೆಚ್ಚಾಗುತ್ತದೆ. ಮದುವೆಯಾಗಿ ಮಕ್ಕಳು ಹುಟ್ಟಿದ ನಂತರ ಹುಡುಗಿಯರ ತೂಕ ಹೆಚ್ಚಾಗುತ್ತದೆ ಎಂಬುದು ನಿಜ. ಆದರೆ ಹುಡುಗರ ತೂಕ ಹೆಚ್ಚಾಗಲು ಕಾರಣ ಏನು..?
ಮಕ್ಕಳು ಹುಟ್ಟಿದ ಹೊಸದರಲ್ಲಿ ಹುಡುಗರ ತೂಕ ವೇಗವಾಗಿ ಹೆಚ್ಚಾಗುತ್ತದೆ. ಒಬ್ಬನೇ ಇದ್ದಾಗ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ತೋರುತ್ತಾರೆ. ಬ್ಯಾಚುಲರ್ಸ್ ತೂಕ ಹೆಚ್ಚು ಆಗದ ಹಾಗೇ ಕಾಳಜಿ ವಹಿಸುತ್ತಾರೆ. ಮದುವೆಯಾದ ಹೊಸದರಲ್ಲಿ ಹೆಚ್ಚು ಆಹಾರ ತೆಗೆದುಕೊಳ್ಳುವುದರಿಂದ ತೂಕ ಹೆಚ್ಚಾಗುತ್ತದೆ. ಹೊಸ ಅಳಿಯನಾದರಿಂದ ಅತ್ತೆ ಮನೆಯವರೂ ಬೇಡವೆಂದರೂ ಒತ್ತಾಯದಿಂದ ಊಟ ಬಡಿಸುತ್ತಾರೆ. ಬಂಧುಗಳ ಮನೆಗೆ ಹೋದರೂ ಇದೇ ಪರಿಸ್ಥಿತಿ. ಇದರಿಂದ ಆಹಾರ ತೆಗೆದುಕೊಳ್ಳುವುದು ಹೆಚ್ಚಾಗುತ್ತದೆ.
ಹೀಗಾಗಿ ದೇಹದ ತೂಕ ಹೆಚ್ಚಾಗುತ್ತದೆ. ಮನೆ ಕೆಲಸ, ಆಫೀಸ್ ಕೆಲಸದ ಒತ್ತಡದಲ್ಲಿ ಊಟ ತಯಾರಿಸಿಕೊಳ್ಳಲಾಗದೇ ಹೊರಗಿನ ಊಟವನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಹೀಗೆ ಯಾವಾಗಲಾದರೂ ಒಮ್ಮೆ ಮಾಡಿದರೆ ಪರವಾಗಿಲ್ಲ. ಅದನ್ನೇ ಅಭ್ಯಾಸ ಮಾಡಿಕೊಂಡರೆ ನಮ್ಮ ದೇಹದಲ್ಲಿ ಕ್ಯಾಲೊರಿಗಳ ಮೂಲಕ ತೂಕ ಹೆಚ್ಚಾಗುತ್ತದೆ. ಆದ್ದರಿಂದ ಹೊರಗಿನ ಅಹಾರವನ್ನು ಕಡಿಮೆ ಮಾಡುವುದು ಉತ್ತಮ. ಮತ್ತು ನಿತ್ಯ ವ್ಯಾಯಾಮ ಮಾಡುವುದು ಮತ್ತು ಡೈಯಟ್ ಮಾಡುವುದು ಅವಶ್ಯಕ. ಹೆಂಡತಿಯಿಂದ ದೂರವಿದ್ದರೂ ಗಂಡನ ತೂಕ ಕಡಿಮೆಯಾಗುತ್ತದೆ. ಮದುವೆಯಾದ ನಂತರ ಹೊರಗಡೆ ಹೋಗಿ ರುಚಿಕರವಾದ ಅಹಾರವನ್ನು ತಿನ್ನುವುದರಿಂದ ಕ್ಯಾಲೊರಿ ಹೆಚ್ಚಾಗುತ್ತದೆ ಎಂದು ಇಂಗ್ಲೆಂಡ್ ನ ಬಾತ್ ಯೂನಿವರ್ಸಿಟಿ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.