ಬೆಂಗಳೂರು: ಸಿನಿಮಾ ಸ್ಟೈಲ್ನಲ್ಲಿ ಮಾಜಿ ಸೈನಿಕನಿಂದ ಯುವಕನ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಬೆಂಗಳೂರಿನ ಗಂಗಮ್ಮನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಮಾಜಿ ಸೈನಿಕ ಪರಶುರಾಮ್ ಎನ್ನುವವರು ಸೂರಜ್ ಎನ್ನುವ ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ನಡುವೆ ಆರೋಪಿ ಪರಶುರಾಮ್ ಅವರು ಸೂರಜ್ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಸದ್ಯ ಪೊಲೀಸರು ಪರಶುರಾಮು ಅವರನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಢಿದ್ದಾರೆ. ಸದ್ಯ ಸೂರಜ್ ಅಪಾಯದಿಂದ ಪಾರಾಗಿದ್ದಾರೆ ಅಂತ ತಿಳಿದು ಬಂದಿದೆ.