ಶಿವಮೊಗ್ಗ: ಮಕ್ಕಳು ಆಟ ಆಡಿಕೊಂಡು ಸುಮ್ಮನೆ ಇದ್ರೆ ಸಾಕಪ್ಪ. ಅವರು ಏನೋ ಒಂದು ಆಟ ಆಡ್ತಾ ಇರಲಿ. ನಮ್ಮ ಪಾಡಿಗೆ ನಾವು ಮನೆ ಕೆಲಸ, ಅದು ಇದು ಮಾಡಿಕೊಳ್ಳಬಹುದು ಅನ್ನೋ ಪೋಷಕರೇ ಎಚ್ಚರ. ನೀವು ನಿಮ್ಮ ಮಕ್ಕಳನ್ನು ಜೀವಂತ ಮೀನುಗಳ ಜೊತೆಗೆ ಆಟ ಆಡೋಕೆ ಬಿಡ್ತಾ ಇದ್ದರೇ ಇನ್ನೂ ಎಚ್ಚರ. ಅದು ಯಾಕೆ ಅಂತ ಮುಂದೆ ಸುದ್ದಿ ಓದಿ.
ಮಕ್ಕಳೆಂದ್ರೇ ಸಾಕು ಊಟ, ತಿಂಡಿ, ಪಾಠ, ಪ್ರವಚನಕ್ಕಿಂತ ಆಟವೇ ಹೆಚ್ಚು. ತಮ್ಮ ಕೈಗೆ ಸಿಕ್ಕಂತ ವಿವಿಧ ವಸ್ತುಗಳನ್ನು ಹಿಡ್ಕೊಂಡು ಆಟ ಆಡಿದ್ದೇ ಆಡಿದ್ದು. ಇನ್ನೂ ಕೆಲವು ಸಂದರ್ಭದಲ್ಲಿ ಮನೆಯಲ್ಲಿ ಇರೋ ಅಕ್ವೇರಿಯಂನಲ್ಲಿನ ಮೀನುಗಳ ಜೊತೆಗೆ ಆಟ ಆಡೋ ಮಕ್ಕಳು ಇದ್ದಾರೆ. ಹೀಗೆ ಆಟ ಆಡುವಾಗ ಮಕ್ಕಳು ಸುಮ್ಮನೇ ಆಟ ಆಡ್ತಿರುತ್ತಾರೆ ಅಂತ ನೀವು ಬಿಟ್ರೇ, ಕೆಲವೊಮ್ಮೆ ಅಹಿತಕರ ಘಟನೆಗಳೇ ನಡೆಯಬಹುದು.
ಹೌದು. ಶಿವಮೊಗ್ಗದಲ್ಲಿ ಹೀಗೆ ಜೀವಂತ ಮಗುವಿನ ಜೊತೆಗೆ ಆಟ ಆಡುತ್ತಿದ್ದಂತ 11 ತಿಂಗಳ ಮಗುವೊಂದು ಜಿಲೇಬಿ ಹೆಸರಿನ ಮೀನೊಂದನ್ನು ನುಂಗಿ ಬಿಟ್ಟಿದೆ. ಅದು ಗಂಟಲಲ್ಲಿ ಹೋಗಿ ಸಿಕ್ಕಿ ಹಾಕಿಕೊಂಡಾಗಲೇ ಪೋಷಕರಿಗೆ ಮಗು ಮೀನು ನುಂಗಿರೋ ವಿಷಯ ತಿಳಿದಿದೆ.
ಕೂಡಲೇ ಜಿಲೇಬಿ ಹೆಸರಿನ ಜೀವಂತ ಮೀನು ನುಂಗಿದ್ದಂತ ಪ್ರತೀಕ್ ಎಂಬ ಮಗುವನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಪೋಷಕರು ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ, ಗಂಟಲಿನಲ್ಲಿ ಸಿಲುಕಿಕೊಂಡಿದ್ದಂತ ಮೀನನ್ನು ಹೊರ ತೆಗೆದಿದ್ದಾರೆ. ಹೀಗಾಗಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಂತ ಪ್ರತೀಕ್ ಎಂಬ 11 ವರ್ಷದ ಮಗು ಈಗ ಪ್ರಾಣಾಪಾಯದಿಂದ ಪಾರಾದಂತೆ ಆಗಿದೆ. ಸೋ ನೀವು ಮಕ್ಕಳನ್ನು ಜೀವಂತ ಮೀನುಗಳ ಜೊತೆಗೆ ಆಟ ಆಡೋದಕ್ಕೆ ಬಿಡೋ ಮುನ್ನ ಎಚ್ಚರಿಕೆ ವಹಿಸೋದು ಮರೆಯಬೇಡಿ.
BREAKING: ‘ಭಾರತೀಯ ಪ್ರವಾಸಿಗ’ರಿಗೆ ಗುಡ್ ನ್ಯೂಸ್: ಇನ್ಮುಂದೆ ‘ಇರಾನ್’ಗೆ ಪ್ರಯಾಣಿಸಲು ‘ವೀಸಾ’ ಅಗತ್ಯವಿಲ್ಲ