ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ಕೆಇಎಯಿಂದ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಬೆಂಗಳೂರಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವಂತ 64 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದೆ.
ಹುದ್ದೆಗಳ ವಿವರ
- ಸಹಾಯಕ ಇಂಜಿನಿಯರ್ (ಸಿವಿಲ್) -50 ಹುದ್ದೆ
- ಪ್ರಥಮ ದರ್ಶೆ ಲೆಕ್ಕ ಸಹಾಯಕರು ( ಗ್ರೂಪ್-ಸಿ) – 14 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ
-ಸಹಾಯಕ ಇಂಜಿನಿಯರ್ ( ಸಿವಿಲ್)ಗೆ ಬಿಇ, ಬಿಟೆಕ್ ಇಂಜಿನಿಯರಿಂಗ್ ಪದವಿಯನ್ನು ಸಿವಿಲ್ ವಿಭಾಗದಲ್ಲಿ ಪಡೆದಿರಬೇಕು. ಆದ್ರೇ ಅಂಚೆ ಮತ್ತು ದೂರು ಶಿಕ್ಷಣ ಮುಖಾಂತರ ಪಡೆದ ತಾಂತ್ರಿಕ ಪದವಿಗಳನ್ನು ನೇಮಕಾತಿಗೆ ಪರಿಗಣಿಸೋದಿಲ್ಲ.
– ಪ್ರಥಮ ದರ್ಶೆ ಲೆಕ್ಕ ಸಹಾಯಕರು ಈ ಹುದ್ದೆಗೆ ಬಿ.ಕಾಂ ಪದವಿ ಪಡೆದಿರಬೇಕು.
ವಯೋಮಿತಿ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38, ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು.
ಅರ್ಜಿ ಸಲ್ಲಿಕೆ ವಿಧಾನ
ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ http://kea.kar.nic.in ನಲ್ಲಿ ಆನ್ ಲೈನ್ ಮೂಲಕ ಸಲ್ಲಿಸಬೇಕಾಗಿದೆ.
ಪ್ರಮುಖ ದಿನಾಂಕಗಳು
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 10-02-2024ರಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸಲು ದಿನಾಂಕ 10-03-2024 ಕೊನೆಯ ದಿನವಾಗಿದೆ. ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ 14-03-2024 ಆಗಿರುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳಾದಂತ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.750.
ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1, ಮಾಜಿ ಸೈನಿಕರು ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ ರೂ.500 ಶುಲ್ಕ ವಿಧಿಸಲಾಗಿದೆ.
ಆಯ್ಕೆ ವಿಧಾನ
ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಪ್ ಲೈನ್ ಒಎಂ ಆರ್ ಮಾದರಿ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದಂತ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಪರೀಕ್ಷಾ ಕೇಂದ್ರಗಳು
ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಾತ್ರವೇ ನಡೆಸಲಾಗುತ್ತಿದೆ.