ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಬಳಿಕ ಮಂಗನಕಾಯಿಲೆ ಉಲ್ಬಣಗೊಳ್ಳುತ್ತಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ ಒಬ್ಬರಿಗೆ ಮಂಗನಕಾಯಿಲೆ ದೃಢಪಟ್ಟಿದೆ. ಹೀಗಾಗಿ ಒಟ್ಟು ಪಾಸಿಟಿವ್ ಪ್ರಕರಣ 65ಕ್ಕೆ ಏರಿಕೆಯಾದಂತೆ ಆಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಮೂವರನ್ನು ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಾದಂತ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ 37 ಮಂದಿಗೆ ಮಂಗನಕಾಯಿಲೆಯಿಂದ ಬಳಲುತ್ತಿರೋರು ಇದ್ದಾರೆ ಎಂಬುದಾಗಿ ತಿಳಿಸಿದೆ.
ದಿನಾಂಕ 01-01-2024ರಿಂದ ದಿನಾಂಕ 05-02-2024ರ ಇಂದಿನವರೆಗೆ 2413 ಮಂದಿಯನ್ನು ಮಂಗನಕಾಯಿಲೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 65 ಮಂದಿಗೆ ಸೋಂಕು ದೃಢಪಟ್ಟಿದೆ. ಈವರೆಗೆ 26 ಸೋಂಕಿತರು ಗುಣಮುಖರಾಗಿದ್ದಾರೆ. ಸೋಂಕಿಗೆ ಒಳಗಾದಂತ ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ 37 ಸಕ್ರೀಯ ಕೆಎಫ್ ಡಿ ಪ್ರಕರಣಗಳಿದ್ದಾವೆ ಎಂದಿದೆ.
ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಇಬ್ಬರು, ಚಿಕ್ಕಮಗಳೂರು ಒಬ್ಬರನ್ನು ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಚಿಕ್ಕಮಗಳೂರಿನಲ್ಲಿ ಪರೀಕ್ಷೆಗೆ ಒಳಗಾದಂತವರಿಗೆ ಮಂಗನಕಾಯಿಲೆ ದೃಢಪಟ್ಟಿದೆ ಎಂದು ಮಾಹಿತಿ ನೀಡಿದೆ.
ರಾಜ್ಯ ಸರ್ಕಾರದಿಂದ ‘ರೈತ’ರಿಗೆ ಗುಡ್ ನ್ಯೂಸ್: ‘ಪಹಣಿ ಸಮಸ್ಯೆ’ಗೆ ಮುಕ್ತಿ, ಎಲ್ಲಾ ದಾಖಲೆಗಳು ‘ಡಿಜಟಲೀಕರಣ’