ನವದೆಹಲಿ : ಫಿನ್ಟೆಕ್ ಸಂಸ್ಥೆ ಪೇಟಿಎಂ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ಹೇರಿರುವ ಬಗ್ಗೆ ಕಾಂಗ್ರೆಸ್ ಸೋಮವಾರ ಜಾರಿ ನಿರ್ದೇಶನಾಲಯವನ್ನ ಪ್ರಶ್ನಿಸಿದೆ.
“ಈ ವಿಷಯದ ಬಗ್ಗೆ ಕೇಂದ್ರದ ನಿಲುವು ಏನು? ಕಳೆದ ಏಳು ವರ್ಷಗಳಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ಗೆ ಏಕೆ ರಿಯಾಯಿತಿ ಸಿಕ್ಕಿತು? ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಂಸ್ಥಾಪಕರು ಪ್ರಧಾನಿ ಮೋದಿಯವರ ಭಕ್ತರಾಗಿದ್ದು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ ಮತ್ತು ಪ್ರಧಾನಿ ಪರವಾಗಿ ಜಾಹೀರಾತುಗಳನ್ನ ಪ್ರಕಟಿಸುತ್ತಾರೆ” ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ ವಾಗ್ದಾಳಿ ನಡೆಸಿದ್ದಾರೆ.
“ಪ್ರಧಾನಿ ಮೋದಿ ತಮ್ಮ ಚುನಾವಣಾ ರ್ಯಾಲಿಗಳಲ್ಲಿ ಪೇಟಿಎಂನ್ನ ಬೆಂಬಲಿಸುತ್ತಾರೆ. ಪ್ರಧಾನಿ ಮೋದಿಯವರ ಸಹಚರರ ವಿರುದ್ಧ ಆರೋಪಗಳು ಬಂದಾಗ ಏಜೆನ್ಸಿಗಳು ಏಕೆ ಮೌನವಾಗಿವೆ.? ಇಡಿ ಏಕೆ ಮೌನವಾಗಿದೆ.?” ಎಂದು ಅವರು ಪ್ರಶ್ನಿಸಿದರು.
ಮೂಲ ಕಂಪನಿ ಒನ್ 97 ಕಮ್ಯುನಿಕೇಷನ್ಸ್ ಅಥವಾ ಅದರ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಜಾರಿ ನಿರ್ದೇಶನಾಲಯದ ತನಿಖೆಯನ್ನ ಎದುರಿಸುತ್ತಿಲ್ಲ ಎಂದು ಪೇಟಿಎಂ ನಿರಾಕರಿಸಿದ ಮಧ್ಯೆ ಕಾಂಗ್ರೆಸ್ ನಾಯಕನ ಹೇಳಿಕೆ ಬಂದಿದೆ.
BREAKING : ವಿದೇಶಿ ಕಾರ್ಮಿಕರು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ‘ಮನೆ ಖರೀದಿ ನಿಷೇಧ’ ವಿಸ್ತರಿಸಿದ ಕೆನಡಾ
ಅಶ್ವಮೇಧ ಹೊಸ ವಿನ್ಯಾಸದ ‘100 ಕರ್ನಾಟಕ ಸಾರಿಗೆ ಎಕ್ಸ್ ಪ್ರೆಸ್’ ಬಸ್ಸು ಲೋಕಾರ್ಪಣೆ: ಇಲ್ಲಿದೇ ಬಸ್ಸುಗಳ ವಿಶೇಷತೆ