ಬೆಂಗಳೂರು:ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೆಚ್ಚ ವಸೂಲಿ ಮಾಡಲು ಸರ್ಕಾರ ಆದೇಶವನ್ನು ಹೊರಡಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ರವರ ಆದೇಶದಂತೆ,2023-243 ಸಾಲಿನ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ದಿನಾಂಕ:26.02.2024 ರಿಂದ 02.03.2024 ರವರೆಗೆ ನಡೆಸಲು ತೀರ್ಮಾನಿಸಲಾಗಿದ್ದು, ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಪುಕಟಿಸಲಾಗಿದೆ.ಪೂರ್ವ ಸಿದ್ಧತಾ ಪರೀಕ್ಷೆಗೆ ಮುಖ್ಯ ಪರೀಕ್ಷೆಯ ಮಾದರಿಯಂತೆ ಪುಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಜಿಲ್ಲಾ ಉಪನಿರ್ದೇಶಕರು [ಆಡಳಿತ]ರವರ ಲಾಗಿನ್‌ಗೆ ಲಭ್ಯಗೊಳಿಸಲಾಗುವುದು. ಸದರಿ ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾ ಉಪನಿರ್ದೇಶಕರು(ಆಡಳಿತ)ರವರ ಹಂತದಲ್ಲಿ ಮುದ್ರಿಸಿ ಸಂಬಂಧಿಸಿದ ಪ್ರೌಢ ಶಾಲೆಗಳಿಗೆ ತಲುಪಿಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮವಹಿಸುವುದು. ಈ ಪರೀಕ್ಷೆ ಸಂಬಂಧ ಪ್ರತಿ ವಿದ್ಯಾರ್ಥಿಯಿಂದ ರೂ.50/-ಗಳನ್ನು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು ಸಂಗ್ರಹಿಸಿ ಜಿಲ್ಲಾ ಉಪನಿರ್ದೇಶಕರು [ಆಡಳಿತ] ರವರ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕ್ರಮವಹಿಸುವುದು. ಈ ಬಗ್ಗೆ ಉಲ್ಲೇಖದಂತೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿರುತ್ತದೆ.
ಸದರಿ ಪರೀಕ್ಷಾ ಖರ್ಚು ವೆಚ್ಚಗಳ ಕುರಿತು ಲೆಕ್ಕಪತ್ರ ನಿರ್ವಹಿಸಿ ತಪಾಸಣಾ ಸಮಯದಲ್ಲಿ ಜಿಲ್ಲಾ ಉಪನಿರ್ದೇಶಕರು ಹಾಜರುಪಡಿಸತಕ್ಕದ್ದು.ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ ದಿಕ್ಕೂಚಿಯಾಗಿರುತ್ತದೆ. ಆದ್ದರಿಂದ ಪೂರ್ವಸಿದ್ಧತಾ ಪರೀಕ್ಷೆಯನ್ನು ಮುಖ್ಯ ಪರೀಕ್ಷೆಯನ್ನು ನಡೆಸುವ ರೀತಿಯಲ್ಲಿಯೇ ಶಿಸ್ತುಬದ್ಧವಾಗಿ, ಹಾಗೂ ಪಾರದರ್ಶಕವಾಗಿ ನಡೆಸಲು, ಜಿಲ್ಲಾ ಉಪನಿರ್ದೇಶಕರು (ಆಡಳಿತ)ರವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವುದು.ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಗೌಪ್ಯತೆ ಮತ್ತು ಪಾರದರ್ಶಕತೆಯೊಂದಿಗೆ ಮುದ್ರಣಕ್ಕೆ, ಕ್ರಮಕೈಗೊಂಡು ಪರೀಕ್ಷೆ ನಡೆಸಲು ಕೈಗೊಳ್ಳಬೇಕಾದಕ್ರಮಗಳು:
1. 2023-24 ನೇ ಸಾಲಿನ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಾಯಿಸಿರುವ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ತಲುಪಿಸಲು ಕ್ರಮ ಕೈಗೊಳ್ಳುವುದು.
2. ಪ್ರಶ್ನೆಪತ್ರಿಕೆಗಳನ್ನು ಸೂಕ್ತ ಭದ್ರತೆಯೊಂದಿಗೆ ಸುರಕ್ಷಿತವಾಗಿ ಸಂರಕ್ಷಿಸಿಕೊಂಡು, ಪ್ರಶ್ನೆಪತ್ರಿಕೆಗಳ ಮುದ್ರಣಕ್ಕೆ ಸೂಕ್ತ ಕ್ರಮಕೈಗೊಂಡು, ಮುದ್ರಣಗೊಂಡ ಪ್ರಶ್ನೆಪತ್ರಿಕೆಗಳನ್ನು ವಿಷಯವಾರು ಮತ್ತು ಶಾಲಾವಾರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕವಾಗಿ ಬಂಡಲ್‌ಗಳನ್ನು ಮಾಡಿ ಆಯಾ ಪರೀಕ್ಷಾ ದಿನಗಳಂದು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ಸುರಕ್ಷಿತವಾಗಿತಲುಪಿಸುವುದು.
3. 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಾಯಿಸಿಕೊಂಡಿರುವ CCERF ವಿದ್ಯಾರ್ಥಿಗಳ ಶಾಲಾವಾರು ಹಾಗೂ ಬ್ಲಾಕ್‌ವಾರು ಕ್ರೋಢೀಕೃತ ಅಂಕಿ ಸಂಖ್ಯೆಗಳನ್ನು ಈಗಾಗಲೇ E.೦ ಮತ್ತು B.E.0 ಲಾಗಿನ್‌ಗೆ ನೀಡಿದ್ದು, ಸದರಿ ಅಂಕಿ ಸಂಖ್ಯೆಗಳನ್ನು ಆಧರಿಸಿ ಪೂರ್ವಸಿದ್ಧ ತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿ ಪರೀಕ್ಷೆಯನ್ನು ನಡೆಸುವುದು.
4. ಜಿಲ್ಲಾ ಉಪನಿರ್ದೇಶಕರು (ಆಡಳಿತ)ರವರ ಲಾಗಿನ್‌ಗೆ 2024 ರ ಫೆಬ್ರವರಿ ಮೊದಲನೇ ವಾರದಲ್ಲಿ ಪ್ರಶ್ನೆಪತ್ರಿಕೆಗಳನ್ನು ಅಪ್‌ಲೋಡ್ ಮಾಡಲಾಗುವುದು.ಅಪ್‌ಲೋಡ್ ಮಾಡಲಾಗುವ ಪ್ರಶ್ನೆಪತ್ರಿಕೆಗಳನ್ನು OTP Based Password ನೀಡಲಾಗುತ್ತಿದ್ದು, ಸ್ವತ: ಉಪನಿರ್ದೇಶಕರು (ಆಡಳಿತ)ರವರೇ Open ಮಾಡಿ, ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳು ಲಾಗಿನ್‌ನಲ್ಲಿ ಲಭ್ಯವಿರುವುದನ್ನು ಖಾತರಿಪಡಿಸಿಕೊಂಡು, ಗೌಪ್ಯತೆ ಕಾಪಾಡಿಕೊಂಡು ಮುದ್ರಣಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದು.
5. ಪ್ರಶ್ನೆಪತ್ರಿಕೆಗಳನ್ನು ಅಪ್ಲೋಡ್ ಮಾಡುವ ಮೊದಲೇ ಉಪನಿರ್ದೇಶಕರು(ಆಡಳಿತ) ರವರು ಪ್ರಶ್ನೆ ಪತ್ರಿಕೆಗಳ ಮುದ್ರಕರನ್ನು ಗುರ್ತಿಸುವುದು.
6. ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ಮುದ್ರಣಕಾರರನ್ನು ಆಯ್ಕೆ ಮಾಡುವಾಗ ಮುದ್ರಣಕ್ಕೆ ಅಗತ್ಯವಿರುವ ಸಾಕಷ್ಟು ಪರಿಕರಗಳು ಮತ್ತು ಸಿಬ್ಬಂದಿಗಳು ಹಾಗೂ ನಿಗದಿತ ಸಮಯಕ್ಕೆ ಮುದ್ರಣ ಹಾಗೂ ಸರಬರಾಜು ಮಾಡಲು ಸೂಕ್ತ ವ್ಯವಸ್ಥೆಗಳಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
7. ಮುದ್ರಣ ಹಾಗೂ ಮಾಹಿತಿ ಸಂರಕ್ಷಣೆಗೆ ಅವಶ್ಯಕವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಮುದ್ರಕರು ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳುವುದು. ಮುದ್ರಣಕಾರರ ಆಯ್ಕೆಯನ್ನು ಗೌಪ್ಯವಾಗಿರಿಸುವುದು ಸಂಪೂರ್ಣವಾಗಿ ಉಪನಿರ್ದೇಶಕರು (ಆಡಳಿತ) ರವರ ಜವಾಬ್ದಾರಿಯಾಗಿದ್ದು, ಯಾರೊಂದಿಗೂ ಮುದ್ರಕರ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ
9. ಮುದ್ರಣಕಾರರು ಬಳಸುವ ಕಂಪ್ಯೂಟರ್/ಲ್ಯಾಪ್ಟಾಪ್ ಇತ್ಯಾದಿಗಳು ಸುರಕ್ಷಿತ ತಂತ್ರಜ್ಞಾನ ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳುವುದು.10. CC-Cameraಗಳನ್ನು ಅಳವಡಿಸಿರುವ ಕೊಠಡಿಯಲ್ಲಿಯೇ ಗೌಪ್ಯ ಸಾಮಗ್ರಿಗಳನ್ನು ಮುದ್ರಿಸುವ, ಪ್ಯಾಕಿಂಗ್ ಮಾಡುವ ಕಾರ್ಯನಿರ್ವಹಿಸುವಂತೆ ಮುದ್ರಕರಿಗೆ ತಿಳಿಸುವುದು.
11. ಮುದ್ರಣ ಕಾರ್ಯದಲ್ಲಿ ಭಾಗವಹಿಸುವ ವ್ಯಕ್ತಿಗಳು Pendrive /Hard disk/Mobile Phoneಇತ್ಯಾದಿಗಳನ್ನು ಬಳಸಲು ನಿರ್ಬಂಧಿಸುವುದು.
12. ಮುದ್ರಕರು ಗೌಪ್ಯ ಸಾಮಗ್ರಿಗಳ ಮುದ್ರಣ ಕಾರ್ಯ ಪೂರ್ಣಗೊಂಡ ನಂತರ ಈ ಕಾರ್ಯಕ್ಕೆ ನೀಡಲಾದ ಎಲ್ಲಾ ವಿಷಯಗಳ ಮಾಹಿತಿಗಳನ್ನು ಅಳಿಸಿ ಹಾಕಿರುವುದನ್ನು ಮತ್ತು ಯಾವುದೇ ಮಾಹಿತಿಯನ್ನು ತಮ್ಮಲ್ಲಿ ಉಳಿಸಿ ಕೊಳ್ಳದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
13. ಪ್ರಶ್ನೆಪತ್ರಿಕೆಗಳ ಮುದ್ರಣ ಕಾರ್ಯ ನಡೆಯುವ ಸಂದರ್ಭದಲ್ಲಿ ಮುದ್ರಣಾಲಯದಲ್ಲಿ ಯಾವುದೇ ಇತರೆ ಕಾರ್ಯಗಳನ್ನು ನಿರ್ವಹಿಸದಂತೆ ಮುದ್ರಕರಿಗೆ ತಿಳಿಸುವುದು.
14. ಮುದ್ರಣ ಕಾರ್ಯ ಮುಗಿದ ನಂತರ ಹೆಚ್ಚುವರಿಯಾಗಿ ಪ್ರಶ್ನೆಪತ್ರಿಕೆಗಳು ಉಳಿದಿದ್ದಲ್ಲಿ ಅವುಗಳನ್ನು ಸೂಕ್ತ ಭದ್ರತೆಯೊಂದಿಗೆ ಸುರಕ್ಷಿತವಾಗಿ ಸಂರಕ್ಷಿಸಿಕೊಂಡು ಪರೀಕ್ಷೆ ಮುಗಿದ ನಂತರ ಅವುಗಳನ್ನು ನಿಯಮಾನುಸಾರ ವಿಲೇ ಮಾಡುವುದು.
15. ಮುದ್ರಣ ಕಾರ್ಯ ನಿರ್ವಹಿಸುವಾಗ Miss Print ಆಗಿರುವ, ಬಳಸಲು ಯೋಗ್ಯವಲ್ಲದ ಅಥವಾ ಅಪೂರ್ಣವಾಗಿ ಮುದ್ರಿತವಾಗಿರುವ ಕಾಗದಗಳನ್ನು ಸಂಪೂರ್ಣವಾಗಿ Destroy ಮಾಡುವುದು. ಪರೀಕ್ಷಾ ನಂತರ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಶಾಲಾ ಹಂತದಲ್ಲಿ ಮಾಡುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡುವುದು.ವಿಶೇಷ ಸೂಚನೆ:ಪ್ರತಿ ಜಿಲ್ಲೆಯ ಪಶ್ನೆ ಪತ್ರಿಕೆಗಳಿಗೆ ಪ್ರತ್ಯೇಕ ಕೋಡ್ ನೀಡಲಾಗಿರುತ್ತದೆ. ಯಾವುದಾದರೂ ಜಿಲ್ಲೆಯ ಪಶ್ನೆ ಪತ್ರಿಕೆಗಳು ಪರೀಕ್ಷಾ ಪೂರ್ವದಲ್ಲಿ ಮತ್ತು ಪರೀಕ್ಷಾ ಸಂದರ್ಭದಲ್ಲಿ ಸೋರಿಕೆಯಾದಲ್ಲಿ ಸಂಬಂಧಿಸಿದ ಉಪನಿರ್ದೇಶಕರ ಮೇಲೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.ಹಾಗಾಗಿ2023-24ನೇ ಸಾಲಿನ ರಾಜ್ಯಮಟ್ಟದಪೂರ್ವಸಿದ್ಧತಾ ಪರೀಕ್ಷೆಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ರವರು ವ್ಯವಸ್ಥಿತವಾಗಿ ನಡೆಸಲು ಸೂಕ್ತ ಕ್ರಮವಹಿಸುವಂತೆ ಈ ಮೂಲಕ ತಿಳಿಸಿದೆ ಅಂತ ಹೇಳಿದೆ.