ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಇದೀಗ ಕಾಡಾನೆ ದಾಳಿಯಿಂದ ರೈತ ಬಲಿಯಾಗಿರೋದಾಗಿ ತಿಳಿದು ಬಂದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ಜಮೀನಿನ ಕೆಲಸದಲ್ಲಿ ನಿರತನಾಗಿದ್ದಂತ ರೈತನೊಬ್ಬನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದೆ. ಹೀಗೆ ಕಾಡಾನೆಯ ದಾಳಿಯಿಂದಾಗಿ ರೈತನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ನಿರಂತರವಾಗಿ ಕಾಡು ಪ್ರಾಣಿ ಹಾವಾಳಿಯಿಂದ ರೈತರಲ್ಲಿ ಆತಂಕ ಉಂಟಾಗಿದೆ. ಇಂತಹ ಕಾಡು ಪ್ರಾಣಿಗಳ ದಾಳಿಯನ್ನು ತಪ್ಪಿಸೋದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂಬುದಾಗಿ ಮುದಗನೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರೈತ ಕಾಡಾನೆ ದಾಳಿಗೆ ಬಲಿಯಾದ ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BIG NEWS: ರಾಜ್ಯ ಸರ್ಕಾರದಿಂದ ‘VA ನೇಮಕಾತಿ’ಯಲ್ಲಿ ಮಹತ್ವದ ಬದಲಾವಣೆ: ‘ಸ್ಪರ್ಧಾತ್ಮಕ ಪರೀಕ್ಷೆ’ ನಿಗದಿ
BIG NEWS: ‘ಸರ್ಕಾರಿ ಕಾರ್ಯಕ್ರಮ’ಗಳ ಆರಂಭದಲ್ಲೇ ‘ನಾಡಗೀತೆ’ ಹಾಡುವುದು ಕಡ್ಡಾಯ – ‘ರಾಜ್ಯ ಸರ್ಕಾರ’ ಆದೇಶ