ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಈ ಫಲಪುಷ್ಪ ಪ್ರದರ್ಶನದಲ್ಲಿ ಸಾರ್ವಜನಿಕರಲ್ಲಿ ಮನುಷ್ಯ-ಪ್ರಾಣಿಗಳ ನಡುವಿನ ಸಹಬಾಳ್ವೆ ಕುರಿತು ಜಾಗೃತಿ ಮೂಡಿಸೋ ಸಲುವಾಗಿ ಇಂದು 60 ಮರದ ಆನೆಗಳ ಹಿಂಡನ್ನು ಪ್ರದರ್ಶನ ಮಾಡಲಾಗುತ್ತಿದೆ.
ನೀಲಗಿರಿ ಬಯೋಸ್ಟೀಯರ್ ರಿಸರ್ವ್ ಪ್ರದೇಶ, ಮಲೈ ಮಹದೇಶ್ವರ ಬೆಟ್ಟ ಸೇರಿದಂತೆ ಇತರ ಕಡೆಗಳಲ್ಲಿ ವಾಸವಿರುವ ಸೋಲಿಗರು, ಜೇನು ಕುರುಬರು, ಬೆಟ್ಟ ಕುರುಬರು, ಪನಯಾ ಮತ್ತು ಇತರೆ ಬುಡಕಟ್ಟು ಜನಾಗಂದ ಪರಿಣಿತರು ಜೀವಂತ ಆನೆಗಳ ಪ್ರತಿರೂಪಗಳನ್ನೇ ಕಾಡಿನ ಕಳೆಗಿಡವಾದ ಲಂಟಾನದಿಂದ ಸಿದ್ಧಪಡಿಸಿದ್ದಾರೆ.
ಬರೋಬ್ಬರಿ 60 ಮರದ ಆನೆಗಳನ್ನು ಇವುಗಳಿಂದ ಸಿದ್ಧಪಡಿಸಿದ್ದು, ಇಂದು ಲಾಲ್ ಬಾಗ್ ನ ಗಾಜಿನಮನೆ, ಜೆಡಿ ಕಚೇರಿ ಸಮೀಪ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಹುಲ್ಲು ಹಾಸು ಪ್ರದೇಶದಲ್ಲಿ ಇಡಲಾಗುತ್ತಿದೆ.
ಫೆಬ್ರವರಿ.3ರ ಇಂದಿನಿಂದ ಮಾರ್ಚ್.3ರವರೆಗೆ ಒಂದು ತಿಂಗಳುಗಳ ಕಾಲ ಲಾಲ್ ಬಾಗ್ ಗೆ ಭೇಟಿ ನೀಡುವಂತ ಸಾರ್ವಜನಿಕರು, ಪ್ರವಾಸಿಗರು 60 ಮರದ ಆನೆಗಳ ಹಿಂಡನ್ನು ನೋಡಬಹುದಾಗಿದೆ.
‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್: ಜೀವ ವಿಮೆ, 2 ಲಕ್ಷದವರೆಗೂ ‘ಅಪಘಾತ ವಿಮೆ’ ಜಾರಿ
‘SSLC, ದ್ವಿತೀಯ PUC ವಿದ್ಯಾರ್ಥಿ’ಗಳಿಗೆ ಮಹತ್ವದ ಮಾಹಿತಿ: ಈ 20 ಅಂಶಗಳ ಕಾರ್ಯಕ್ರಮ ರೂಪಿಸಿದ ‘ಪರೀಕ್ಷಾ ಮಂಡಳಿ’