ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕವಾದಂತೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಟ್ಟಾಭಿಷೇಕ ಸದ್ಯದಲ್ಲೇ ಆಗಲಿದೆ ಎಂಬುದಾಗಿ ವಿನಯ್ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಚಿಕ್ಕಮಗಳೂರು ನಗರ ಜಿಲ್ಲಾ ಕಾರಾಗೃಹದಲ್ಲಿ ನಡೆದಂತ ಪಾರ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ ನೋಡಿ ಆಗಿದೆ. ಸದ್ಯದಲ್ಲೇ ನರೇಂದ್ರ ಮೋದಿಯವರ ಪಟ್ಟಾಭಿಷೇಕವನ್ನು ನಾವು, ನೀವೆಲ್ಲರೂ ನೋಡುತ್ತೇವೆ ಎಂದರು.
ಕಳೆದ ಬಾರಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆಯಲ್ಲಿ ವಿನಯ್ ಗುರೂಜಿ ಮೋದಿಯವರಿಗೆ ರಾಮನ ಧನಸ್ಸನ್ನು ಉಡುಗೋರೆಯಾಗಿ ನೀಡಿದ್ದನ್ನು ನಾವು ನೆನಪು ಮಾಡಿಕೊಳ್ಳಬಹುದು.