ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ತೆರವಿನ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡುವಂತೆ ಮನವಿ ಮಾಡಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರೋ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ತನ್ನ ವ್ಯಾಪ್ತಿಯ ರಸ್ತೆ ಬದಿ/ಸರ್ಕಾರಿ ಜಾಗಗಳಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ರೆಂಬೆ ಕೊಂಬೆಗಳನ್ನು ಅರಣ್ಯ ವಿಭಾಗದ ವತಿಯಿಂದ ಈಗಾಗಲೆ ತೆರವುಗೊಳಿಸಲಾಗುತ್ತಿದೆ ಎಂದಿದೆ.
ಮುಂದುವರಿದು, ಸಾರ್ವಜನಿಕರುಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ಅಪಾಯ ಸ್ಥಿತಿಯ ರೆಂಬೆಗಳು ಕಂಡುಬಂದಲ್ಲಿ ಈ ಕೆಳಕಂಡ ಅಧಿಕಾರಿಗಳಿಗಳಿಗೆ ದೂರವಾಣಿ ಮುಖೇನ(ವಾಟ್ಸ್ ಅಪ್ ಮುಖಾಂತರ ಜಿ.ಪಿ.ಎಸ್ ಸಹಿತ ಫೋಟೋ ಲಗತ್ತಿಸಿ) ವಿಳಾಸದೊಂದಿಗೆ ಮಾಹಿತಿ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀ ಬಿ.ಜಿ.ಎಲ್ ಸ್ವಾಮಿ ರವರು ಸಾರ್ವಜನಿಕ ಪ್ರಕಟಣೆ ಮೂಲಕ ಕೋರಿದೆ.
ಉಪ ವಿಭಾಗ ಹಾಗೂ ವಲಯವಾರು ಅಧಿಕಾರಿಗಳ ವಿವರ:
1. ಉಪ ವಿಭಾಗ-1:
(ಅ) ಎ.ಡಿ.ಪ್ರಕಾಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ.
ಮೊ.ಸಂ: 9663035011/9480683886
(ಪೂರ್ವ, ಯಲಹಂಕ, ಮಹದೇವಪುರ ಮತ್ತು ದಾಸರಹಳ್ಳಿ ವಲಯ)
2. ಉಪ ವಿಭಾಗ-2:
(ಅ) ಸಂತೋಷ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ.
ಮೊ.ಸಂ: 7019464699
(ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ & ರಾಜರಾಜೇಶ್ವರಿನಗರ ವಲಯ)
3. ಪೂರ್ವ ವಲಯ:
(ಅ) ತಿಮ್ಮಪ್ಪ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 9380090027
(ಆ) ರವೀಂದ್ರನಾಥ್, ಉಪ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 6361903330
(ಇ) ನಾಗೇಂದ್ರ.ಪಿ, ಉಪ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ
ಮೊ.ಸಂ: 9113530344
4. ಪಶ್ಚಿಮ ವಲಯ:
(ಅ) ಶಿವರಾಮು, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 9480683341
5. ದಕ್ಷಿಣ ವಲಯ:
(ಅ) ಎಸ್.ಆರ್.ಕೃಷ್ಣ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ
ಮೊ.ಸಂ: 7760553545
ಶ್ರೀ ಹರೀಶ್ ಹೆಚ್.ಆರ್, ಉಪ ವಲಯ ಅರಣ್ಯಾಧಿಕಾರಿ, 9480685039
6. ದಾಸರಹಳ್ಳಿ ವಲಯ:
(ಅ) ರಾಜಪ್ಪ.ಕೆ.ಎನ್, ಪ್ರಭಾರ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 9448234928
7. ಬೊಮ್ಮನಹಳ್ಳಿ ವಲಯ:
(ಅ) ನರೇಂದ್ರ ಬಾಬು, ಪ್ರಭಾರ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 9480685399
8. ಯಲಹಂಕ ವಲಯ:
(ಅ) ಚಂದ್ರಪ್ಪ.ವಿ, ಪ್ರಭಾರ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 9064042566
9. ರಾ.ರಾ.ನಗರ ವಲಯ:
(ಅ) ಎಸ್.ಆರ್.ಕೃಷ್ಣ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 7760553545
10. ಮಹದೇವಪುರ ವಲಯ:
(ಅ) ಪುಷ್ಪ. ಎಂ, ವಲಯ ಅರಣ್ಯಾಧಿಕಾರಿ, ಬಿಬಿಎಂಪಿ.
ಮೊ.ಸಂ: 8147276414
(ಆ) ಸುದರ್ಶನ್.ಎ, ಉಪ ವಲಯ ಅರಣ್ಯಾಧಿಕಾರಿ, ಬಿಬಿಎಂಪಿ
ಮೊ.ಸಂ: 7899555182.
BREAKING: ಬೆಂಗಳೂರಲ್ಲಿ ‘ED ಅಧಿಕಾರಿ’ಗಳ ವಿರುದ್ಧದ ‘FIR’: ಪೊಲೀಸರ ತನಿಖೆಗೆ ‘ಹೈಕೋರ್ಟ್’ ತಡೆ