ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ಪ್ರಯಾಣಿಕರ ಸುರಕ್ಷತೆಯಿಂದ, ಅವರ ಆರಾಮದಾಯಕ ಪ್ರಯಾಣಕ್ಕೆ ಸದಾ ಕ್ರಮವಹಿಸಿದೆ. ಇಂತಹ ಕೆಎಸ್ಆರ್ ಟಿಸಿಯು, ಈಗ ಪ್ರಯಾಣಿಕರಿಗೆ 100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳನ್ನು ಫೆಬ್ರವರಿ.5ರಂದು ರಸ್ತೆಗೆ ಇಳಿಸುತ್ತಿದೆ.
ಈ ಕುರಿತಂತೆ ನಿಗಮದಿಂದ ಪತ್ರಿಕಾ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 05-02-2024ರಂದು ವಿಧಾನಸೌಧದ ಮುಂಭಾಗದಲ್ಲಿ 100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳ ಲೋಕಾರ್ಪಣೆ ಕಾರ್ಯ ನಡೆಯಲಿದೆ ಎಂದಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನವರಿ.5ರಂದು ಬೆಳಿಗ್ಗೆ 10.30ಕ್ಕೆ ಅಶ್ವಮೇಧ ಕ್ಲಾಸಿಕ್ ಬಸ್ ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಯಾಣದ ಮರುಕಲ್ಪನೆ, ಪಾಯಿಂಟ್ ಟು ಪಾಯಿಂಟ್ ಎಕ್ಸ್ ಪ್ರೆಸ್ ಟ್ಯಾಗ್ ಲೈನ್ ಹೊಂದಿರುವಂತ ಬಸ್ಸುಗಳು ಅಂದಿನಿಂದ ರಸ್ತೆಗೆ ಇಳಿಯಲಿದೆ ಎಂದು ತಿಳಿಸಿದೆ.
ಈ ಅಶ್ವಮೇಧ ಕ್ಲಾಸಿಕಲ್ 100 ಹೊಸ ವಿನ್ಯಾಸದ ಸಾರಿಗೆ ಬಸ್ಸುಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಡಿಸಿಎಂ ಡಿಕೆ ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಾಗಿರಲಿದ್ದಾರೆ.
BREAKING: ‘ರಾಮನಗರ’ದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ‘ಚುನಾವಣಾ ಶಾಖಾಧಿಕಾರಿ’ ಶವ ಪತ್ತೆ