ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ಮಾಸಿಕ 48 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ 70 ಲಕ್ಷ ಗ್ರಾಹಕರಿಗೆ ಇನ್ನುಮುಂದೆ ಮಾಸಿಕ 10% ಹೆಚ್ಚುವರಿ ವಿದ್ಯುತ್ ಬದಲಾಗಿ 10 ಯುನಿಟ್ ಹೆಚ್ಚುವರಿ ಉಚಿತ ವಿದ್ಯುತ್ ಸಿಗಲಿದೆ. ಇನ್ನೂ ಪ್ರತಿ ಮನೆಗೆ ಭರವಸೆಯ ಬೆಳಕು ಹರಿಸುವ ಸರ್ಕಾರದ ಕಾರ್ಯಕ್ರಮ ಈಗ ಇನ್ನಷ್ಟು ಜನಸ್ನೇಹಿಯಾಗಲಿದೆ ಅಂತ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಇನ್ನೂ ವೇಳೆ ಅವರು ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ಸಂಬಂಧ ಗೌರವಾನ್ವಿತ ರಾಜ್ಯಪಾಲರು ಮಸೂದೆಯನ್ನು ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆಯುವಂತೆ ತಿಳಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ, ಅಂಗೀಕಾರ ಪಡೆದು ಕಾನೂನಿನ ರೂಪದಲ್ಲಿ ಜಾರಿ ಮಾಡುತ್ತೇವೆ. ಈ ವಿಚಾರದಲ್ಲಿ ನಮ್ಮ ನಿಲುವು ಅಚಲವಾಗಿದೆ. ಅಂತ ತಿಳಿಸಿದ್ದಾರೆ.
" ಗೃಹಜ್ಯೋತಿ ಬಳಕೆದಾರರಿಗೆ ಶುಭ ಸುದ್ದಿ "
ಗೃಹಜ್ಯೋತಿ ಯೋಜನೆಯಡಿ ಮಾಸಿಕ 48 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ 70 ಲಕ್ಷ ಗ್ರಾಹಕರಿಗೆ ಇನ್ನುಮುಂದೆ ಮಾಸಿಕ 10% ಹೆಚ್ಚುವರಿ ವಿದ್ಯುತ್ ಬದಲಾಗಿ 10 ಯುನಿಟ್ ಹೆಚ್ಚುವರಿ ಉಚಿತ ವಿದ್ಯುತ್.
ಪ್ರತಿ ಮನೆಗೆ ಭರವಸೆಯ ಬೆಳಕು ಹರಿಸುವ ಸರ್ಕಾರದ ಕಾರ್ಯಕ್ರಮ ಈಗ ಇನ್ನಷ್ಟು ಜನಸ್ನೇಹಿ.… pic.twitter.com/JMmXWu5NjN
— Siddaramaiah (@siddaramaiah) February 1, 2024