Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಆಪರೇಷನ್ ಸಿಂಧೂರ್ ನಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ : ಭಾರತೀಯ ಸೇನೆ ಸ್ಪಷ್ಟನೆ

11/05/2025 7:30 PM

BREAKING : ಪಾಕಿಸ್ತಾನ ಕರೆ ಮಾಡಿ ಮನವಿ ಮಾಡಿದಕ್ಕೆ ‘ಕದನ ವಿರಾಮ’ ಘೋಷಣೆ : DGMO ರಾಜೀವ್ ಘಾಯ್ ಸ್ಪಷ್ಟನೆ

11/05/2025 7:25 PM

BREAKING : ಪಾಕಿಸ್ತಾನದ 35-40 ಸೈನಿಕರನ್ನು ಕೊಂದಿದ್ದೇವೆ : ಏರ್ ಮಾರ್ಷಲ್ ಅವಧೆಶ್ ಕುಮಾರ್ ಭಾರ್ತಿ ಹೇಳಿಕೆ

11/05/2025 7:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದಿನ ರಾಜ್ಯ ‘ಸಚಿವ ಸಂಪುಟ’ ಸಭೆಯ ಹೈಲೆಟ್ಸ್‌ ಇಲ್ಲಿದೆ | Karnataka Cabinet Meeting
KARNATAKA

ಇಂದಿನ ರಾಜ್ಯ ‘ಸಚಿವ ಸಂಪುಟ’ ಸಭೆಯ ಹೈಲೆಟ್ಸ್‌ ಇಲ್ಲಿದೆ | Karnataka Cabinet Meeting

By kannadanewsnow0901/02/2024 3:59 PM

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ಸೇರಿದಂತೆ ಮಹತ್ವದ ನಿರ್ಧಾರಗಳಿಗೆ ಅಸ್ತು ಎನ್ನಲಾಗಿದೆ. ಆ ಸಚಿವ ಸಂಪುಟ ಸಭೆಯ ಹೈಲೈಟ್ಸ್ ಮುಂದೆ ಓದಿ.

ಇಂದು ವಿಧಾನಸೌಧದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಸಂಪುಟದ ನಿರ್ಧಾರಗಳನ್ನು ಸುದ್ದಿಗಾರರೊಂದಿಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಹಂಚಿಕೊಂಡರು. ಇಂದು 36 ವಿಷಯಗಳ ಬಗ್ಗೆ ಚರ್ಚೆಯಾಗಿದೆ. 3 ವಿಷಯಗಳನ್ನ ಡೆಫರ್ ಮಾಡಲಾಗಿದೆ. ಕೆಜಿಎಫ್ ಚಿನ್ನದ ಗಣಿಗಾರಿಕೆಗೆ ಅನುಮತಿ ಇಲ್ಲ. ಕೇಂದ್ರದಿಂದ ಗಣಿ ಚಟುವಟಿಕೆ ಕೈಗೊಳ್ಳಲು ಬಗ್ಗೆ ಅನುಮತಿ. 1೦೦೦ ಎಕರೆ ಪ್ರದೇಶದಲ್ಲಿ ಚಟುವಟಿಕೆ. ಕೇಂದ್ರದ ಪ್ರಾಸ್ತಾವನೆಗೆ ನಿರ್ಣಯ ತೆಗೆದುಕೊಂಡಿಲ್ಲ. ಇಂದು ಅದನ್ನ ಕೈಬಿಡಲಾಗಿದೆ ಎಂದರು.

ಸಿವಿಲ್ ಸೇವೆ ನೇಮಕಾತಿ ತಿದ್ದುಪಡಿಗೆ ಸಮ್ಮತಿ ನೀಡಲಾಗಿದೆ. ಕ್ರೀಡಾಪಟುಗಳಿಗೆ ನೇರನೇಮಕಾತಿಯಲ್ಲಿ ಅವಕಾಶ ನೀಡಲಾಗುತ್ತಿದೆ. ಶೇ.2% ಅವಕಾಶ ನೀಡಲು ಸಂಪುಟ ಸಮ್ಮತಿ ಸೂಚಿಸಲಾಗಿದೆ ಎಂದು ತಿಳಿಸಿದರು.

ಹಾಸನ ವೈದ್ಯಕೀಯ ಸಂಸ್ಥೆ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕಾಗಿ 142 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ರಾಯಚೂರು ವಿವಿ ಆವರಣದಲ್ಲಿ ಅಧ್ಯಯನ ಸಂಸ್ಥೆಗೆ ಒಪ್ಪಿಗೆ ಸೂಚಿಸಲಾಗಿದೆ. ಜಿನೋಮ್ ಅಧ್ಯಯನ ಸಂಸ್ಥೆ ಪ್ರಾರಂಭಕ್ಕೆ ಅವಕಾಶ ನೀಡಲಾಗುತ್ತಿದೆ. 47.32 ಕೋಟಿ ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಲಾಗಿದೆ. ಡಿಎನ್ ಎ ಪರೀಕ್ಷಾ ಅಧ್ಯಯನ ಸಂಸ್ಥೆ ಇದು ಆಗಿದೆ ಎಂದರು.

ಕರ್ನಾಟಕ ಪಬ್ಲಿಕ್ ಶಾಲೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. 26.84 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತಿದೆ. 9 ಕೋಟಿ ಕಲಿಕಾ ಕಾರ್ಯಕ್ರಮಕ್ಕೆ ಅನುದಾನ ನೀಡಲಾಗುತ್ತಿದೆ. 84 ಪಬ್ಲಿಕ್ ಶಾಲೆಗಳಿಗೆ 24 ಕೋಟಿ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ. ಕಲಿಕಾ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. 11 ಮಹಾನಗರ, 24 ನಗರಸಭೆಗಳಲ್ಲಿ ಚಿತಾಗಾರ ನಿರ್ಮಾಣಕ್ಕಾಗಿ 126 ಕೋಟಿ ವೆಚ್ಚಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಬೈಯ್ಯಪ್ಪನಹಳ್ಳಿಯಲ್ಲಿ ನಿರ್ಮಿಸಲಿರುವ ಮೇಲ್ಸೇತುವೆ ನಿರ್ಮಾಣಕ್ಕಾಗಿ ಒಟ್ಟು 263 ಕೋಟಿ ವೆಚ್ಚಕ್ಕೆ ಸಂಪುಟ ಸಮ್ಮತಿ ಸೂಚಿಸಲಾಗಿದೆ ಎಂದರು.

ಕೆರೆನೀರು ತುಂಬಿಸುವ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಬೆಳಗಾವಿ ತಾಲೂಕಿನ 20 ಕೆರೆಗಳಿಗೆ ನೀರು ಪೂರೈಕೆ. ಉಚ್ಚಂಗಾವ್,ಸಂತೆಬಸ್ತವಾಡ ಹೋಬಳಿಗೆ ಸೇರಿದ ಕೆರೆಗಳು. ಒಟ್ಟು 287 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಿದೆ. ಹಿರೆಬಾಗೇವಾಡಿಯ 61 ಕೆರೆಗಳಿಗೆ ನೀರು ಪೂರೈಕೆ ಮಾಡಲು 519 ಕೋಟಿ ರೂ ಯೋಜನೆಗೆ ಒಪ್ಪಿಗೆ ನೀಡಿದೆ. 151 ಕೋಟಿ ಪರಿಷ್ಕೃತ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಬರುವ ಹಿರೇಬಾಗೇವಾಡಿ, ಘಟಪ್ರಭಾ ನದಿಯಿಂದ ಕೆರೆಗೆ ನೀರು ಪೂರೈಕೆ. ತುಂಗಭದ್ರಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ. ರಾಯಚೂರು ಜಿ.ಚಿಕ್ಕಮಂಚಾಲಿಯಲ್ಲಿ ನಿರ್ಮಾಣ. ಆಂಧ್ರದ ಅನುಮತಿ ಆಧಾರದ ಮೇಲೆ ನಿರ್ಮಾಣ. 158 ಕೋಟಿ ವೆಚ್ಚಕ್ಕೆ ಸಂಪುಟದ ಒಪ್ಪಿಗೆ ಸೂಚಿಸಲಾಗಿದೆ ಎಂದರು.

ರಾಜ್ಯದ 6 ಜಿಲ್ಲೆಗಳಲ್ಲಿ ಶಿಥಲೀಕರಣ ಘಟಕ ನಿರ್ಮಾಣಕ್ಕಾಗಿ ಒಟ್ಟು 65 ಕೋಟಿ ವೆಚ್ಚಕ್ಕೆ ಸಂಪುಟದ ಒಪ್ಪಿಗೆ ನೀಡಿದೆ. ರಾಜೀವ್ ಆರೋಗ್ಯ ವಿವಿ ಪ್ರಾದೇಶಿಕ ಸಂಸ್ಥೆ ಪ್ರಾರಂಭ ಮಾಡಲಾಗುತ್ತಿದೆ. 49.80 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.

ಕಲಬುರಗಿ, ಬೆಳಗಾವಿಯಲ್ಲಿ ಸುಟ್ಟಗಾಯದ ಆಸ್ಪತ್ರೆ ನಿರ್ಮಾಣ. ಎರಡು ವೈದ್ಯಕೀಯ ವಿವಿ ಆವರಣದಲ್ಲಿ ನಿರ್ಮಾಣ. ಇದಕ್ಕೆ 31.54 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ ಎಂದರು.

ಹಿಂದೂ ಮ್ಯಾರೇಜ್ ಆ್ಯಕ್ಟ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ವಿವಾಹ ಸರಳೀಕರಣಕ್ಕೆ ಸರ್ಕಾರದ ಸಮ್ಮತಿ ನೀಡಲಾಗಿದೆ. ಹಿಂದೂ ವಿವಾಹ ನೊಂದಣಿ ಕಾಯ್ದೆ 2024 ಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಕಚೇರಿಗಳಲ್ಲಿ ಮೊದಲು ವಿವಾಹ ಆಗುತ್ತಿದ್ದವು. ಆನ್ಲೈನ್ ಮೂಲಕ ನೊಂದಣಿಗೆ ಅವಕಾಶ ನೀಡಲಾಗುತ್ತಿದೆ. ಗ್ರಾಮ ಒನ್, ಕಾವೇರಿ 2ನಲ್ಲಿ ನೊಂದಣಿ ಮಾಡಬಹುದು. ಇನ್ಮೇಲೆ ಸಬ್ ರಿಜಿಸ್ಟರ್ ಕಚೇರಿಗೆ ಅಲೆಯುವಂತಿಲ್ಲ ಎಂದು ತಿಳಿಸಿದರು.

6 ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಣ ಮಾಡಲಾಗುತ್ತಿದೆ. 100 ಕೋಟಿ ವೆಚ್ಚದಲ್ಲಿ ಉನ್ನತೀಕರಣ. ಅನುದಾನ ಬಿಡುಗಡೆಗೆ ಸಂಪುಟ ಸಮ್ಮತಿ ನೀಡಿದೆ. ಚಾಮರಾಜಪೇಟೆ ಬೃಹತ್ ಮಳೆ ನೀರು ಗಾಲುವೆ ನಿರ್ಮಾಣ. 30 ಕೋಟಿ ಹೆಚ್ಚುವರಿ ಅನುದಾನದಲ್ಲಿ ನಿರ್ಮಾಣ. 30 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗುತ್ತಿದೆ. 1200 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ

ಎಸ್ಸಿಪಿ, ಟಿಎಸ್ಪಿ ಅನುದಾನದಲ್ಲಿ ಅಭಿಯಾನಕ್ಕೆ 21.11 ಕೋಟಿ ವೆಚ್ಚ ಭರಿಸಲು ಒಪ್ಪಿಗೆ ನೀಡಿದೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ. 150 ಕೋಟಿ ಅಂದಾಜು‌ಮೊತ್ತಕ್ಕೆ ಒಪ್ಪಿಗೆ ನೀಡಿದೆ ಎಂದರು.

ಪೊಲೀಸ್ ಪ್ರಧಾನ ಕಚೇರಿಯ ವಾಹನಗಳಿಗೆ ತೈಲ ಪೂರೈಕೆ. ತೈಲ ಪೂರೈಸಲು ಅನುವಾಗುವಂತೆ ಪೆಟ್ರೋಕಾರ್ಡ್. ವಾರ್ಷಿಕ 171 ಕೋಟಿ ವೆಚ್ಚದಲ್ಲಿ ನೀಡಲು ಒಪ್ಪಿಗೆ ನೀಡಲಾಗಿದೆ ಎಂದರು.

ನಂದಿ ವೈದ್ಯಕೀಯ ವಿಜ್ಙಾನ‌ಸಂಸ್ಥೆ ಆವರಣದಲ್ಲಿ ಕಟ್ಟಡ. ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಅಸಮ್ಮತಿಸಲಾಗಿದೆ. 800 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ. ತಾತ್ಕಾಲಿಕ ಅನುಮೋದನೆ ಕೈಬಿಡಲಾಗುತ್ತಿದೆ ಎಂದರು.

110 ಹಳ್ಳಿಗಳಿಗೆ ನೀರು ಪೂರೈಕೆ. ಬಿಬಿಎಂಪಿಗೆ ಸೇರ್ಪಡೆಯಾಗಿರುವ ಹಳ್ಳಿಗಳು. ಮೂಲಸೌಕರ್ಯಕ್ಕೆ ಅನುದಾನ ಬಿಡುಗಡೆ. ಸಹಕಾರಿ ಸಮೃದ್ಧ ಸೌಧ ನಿರ್ಮಾಣಕ್ಕೆ ಒಪ್ಪಿಗೆ. ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ. ಸಾಲ ಪಡೆದ ರೈತರ ಸುಸ್ತಿ‌ಬಡ್ಡಿ ಮನ್ನಾ. ಮಧ್ಯಮಾವಧಿ, ಧೀರ್ಘಾವದಿ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತದೆ. ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಅನುಮೋದನೆ ನೀಡಲಾಗುತ್ತದೆ. 440 ಕೋಟಿ 20 ಲಕ್ಷ ಸುಸ್ತಿ ಬಡ್ಡಿ ಮನ್ನಾ. ಸಹಕಾರಿ ಸಂಘಗಳಿಂದ ಪಡೆದಿದ್ದ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತಿದೆ. ಸರ್ಕಾರ ನಿರ್ಧಾರಕ್ಕೆ ಸಂಪುಟದ ಅನುಮೋದನೆ ನೀಡಿದೆ ಎಂದರು.

ನಾಮಫಲಕ ಕಡ್ಡಾಯ ಕನ್ನಡ ವಾಪಸ್ ವಿಚಾರವಾಗಿ ಮಾತನಾಡಿದಂತ ಅವರು, ತಾಂತ್ರಿಕ ಕಾರಣಗಳಿಂದ ವಾಪಸ್ ಆಗಿದೆ. ಇಲ್ಲದೆ ಹೋಗಿದ್ದರೆ ವಾಪಸ್ ಆಗ್ತಿರಲಿಲ್ಲ. ಅಧಿವೇಶನದಲ್ಲಿ ಪಾಸು ಮಾಡಿ ಕಳಿಸ್ತೇವೆ. ರಾಜಭವನದಲ್ಲಿ 6 ಬಿಲ್ ಗಳು ಪೆಂಡಿಂಗ್ ಇವೆ. ಅದಕ್ಕೆ‌ಕ್ಲಾರಿಫೈ ಕೇಳಿದ್ದರು. ಕೇಳಿದ್ದ ಮಾಹಿತಿಯನ್ನ ನಾವು ಒದಗಿಸಿದ್ದೇವೆ ಎಂದರು.

ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದಂತ ಅವರು, ಒಬ್ಬ ಮಂತ್ರಿಯಾಗಿ ನಾನು ಹೇಳ್ತೇನೆ. ಆರ್ಥಿಕ‌ ಗದಾಪ್ರಹಾರ ಮಾಡುವ ನೀತಿ ಖಂಡನೀಯ. ಯಾವ ಕಾರಣಕ್ಕೆ ರಾಜ್ಯಕ್ಕೆ ಕಡಿಮೆ ಕೊಡ್ತೀರ. ದೊಡ್ಡ ಪ್ರಮಾಣದ ಬರದ ನೆರವು ಯಾವಾಗ ಕೊಡ್ತೀರ. ನಯಾಪೈಸೆ ಪರಿಹಾರದ ಹಣ ಕೊಟ್ಟಿಲ್ಲ. ಪೆಡರಲ್ ವ್ಯವಸ್ಥೆಗೆ ಎಲ್ಲಾ ರಾಜ್ಯ ವಿಶ್ವಾಸ ಇಟ್ಟಿವೆ. ವಿಶ್ವಾಸ ಕೆಡಿಸುವ ಕೆಲಸ ನಡೆದಿದೆ. ದಕ್ಷಿಣದ ರಾಜ್ಯಗಳನ್ನ ಕಡೆಗಣಿಸಲಾಗಿದೆ. ಎಲ್ಲಿ ಶ್ರಮ ಇದೆ ನ್ಯಾಯಯುತ ಪಾಲು ಕೊಡಬೇಕು. ಪಾಲು ಬರದೇ ಹೋದರೆ ಏನು‌ ಮಾಡಬೇಕು ಎಂದು ಪ್ರಶ್ನಿಸಿದರು.

ಅನಗತ್ಯ ಘೋಷಣೆ ಹಿನ್ನಲೆ: 2 ಬಾರಿ ರಾಜ್ಯಸಭೆ ಸದಸ್ಯೆಯಾಗಿ ಎಎಪಿಯ ‘ಸ್ವಾತಿ ಮಲಿವಾಲ್’ ಪ್ರಮಾಣವಚನ ಸ್ವೀಕಾರ

“ಸ್ವೀಟ್ ಸ್ಪಾಟ್ , ಅನೇಕ ಉದ್ಯೋಗಾವಕಾಶಗಳು” : ‘ಮಧ್ಯಂತರ ಬಜೆಟ್’ಗೆ ‘ಪ್ರಧಾನಿ ಮೋದಿ’ ಫುಲ್ ಮಾರ್ಕ್ಸ್

Share. Facebook Twitter LinkedIn WhatsApp Email

Related Posts

BREAKING : ಮಹಿಳೆಯರ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್ : ಬೆಂಗಳೂರಲ್ಲಿ ಕಾಮುಕ ಅರೆಸ್ಟ್

11/05/2025 6:02 PM1 Min Read

BIG NEWS : ಕಾಶ್ಮೀರದ ಕೃಷಿ ವಿಜ್ಞಾನ ವಿವಿಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

11/05/2025 3:35 PM1 Min Read

BREAKING : ರಾಮನಗರದಲ್ಲಿ ಭೀಕರ ಅಪಘಾತ : ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸಾವು, ನಾಲ್ವರು ಗಂಭೀರ

11/05/2025 3:22 PM1 Min Read
Recent News

BREAKING : ಆಪರೇಷನ್ ಸಿಂಧೂರ್ ನಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ : ಭಾರತೀಯ ಸೇನೆ ಸ್ಪಷ್ಟನೆ

11/05/2025 7:30 PM

BREAKING : ಪಾಕಿಸ್ತಾನ ಕರೆ ಮಾಡಿ ಮನವಿ ಮಾಡಿದಕ್ಕೆ ‘ಕದನ ವಿರಾಮ’ ಘೋಷಣೆ : DGMO ರಾಜೀವ್ ಘಾಯ್ ಸ್ಪಷ್ಟನೆ

11/05/2025 7:25 PM

BREAKING : ಪಾಕಿಸ್ತಾನದ 35-40 ಸೈನಿಕರನ್ನು ಕೊಂದಿದ್ದೇವೆ : ಏರ್ ಮಾರ್ಷಲ್ ಅವಧೆಶ್ ಕುಮಾರ್ ಭಾರ್ತಿ ಹೇಳಿಕೆ

11/05/2025 7:08 PM

BREAKING : ‘ಆಪರೇಷನ್ ಸಿಂಧೂರ್’ ನಲ್ಲಿ ಉಗ್ರರ ನೆಲೆಗಳನ್ನು ನಾಶ ಮಾಡಿರೋ ಸಾಕ್ಷಿಗಳಿವೆ : ಫೋಟೋ ರಿಲೀಸ್ ಮಾಡಿದ ಸೇನೆ

11/05/2025 6:55 PM
State News
KARNATAKA

BREAKING : ಮಹಿಳೆಯರ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್ : ಬೆಂಗಳೂರಲ್ಲಿ ಕಾಮುಕ ಅರೆಸ್ಟ್

By kannadanewsnow0511/05/2025 6:02 PM KARNATAKA 1 Min Read

ಬೆಂಗಳೂರು : ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತು ಆಗ್ತಿದೆ. ಇದೀಗ ಮಹಿಳಾ ಸಹೋದ್ಯೋಗಿಗಳ ಭಾವಚಿತ್ರಗಳನ್ನು…

BIG NEWS : ಕಾಶ್ಮೀರದ ಕೃಷಿ ವಿಜ್ಞಾನ ವಿವಿಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

11/05/2025 3:35 PM

BREAKING : ರಾಮನಗರದಲ್ಲಿ ಭೀಕರ ಅಪಘಾತ : ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸಾವು, ನಾಲ್ವರು ಗಂಭೀರ

11/05/2025 3:22 PM

BREAKING : ಬಾಗಲಕೋಟೆಯಲ್ಲಿ ಭೀಕರ ಅಪಘಾತ : ಟಿಪ್ಪರ್ ಹರಿದು ಬೈಕ್ ಸವಾರ ದುರ್ಮರಣ

11/05/2025 2:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.