ನವದೆಹಲಿ: ಮಧ್ಯಂತರ ಬಜೆಟ್ಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕ್ಯಾಬಿನೇಟ್ ಗ್ರೀನ್ ಸಿಗ್ನಲ್ ನೀಡಿದೆ.
ಈ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಬೆಳಿಗ್ಗೆ ಮಧ್ಯಂತರ ಬಜೆಟ್ ಮಂಡಿಸಲು ಸಂಸತ್ತಿಗೆ ತೆರಳುತ್ತಿದ್ದಾಗ ತಮ್ಮ ಡಿಜಿಟಲ್ ಟ್ಯಾಬ್ಲೆಟ್ನೊಂದಿಗೆ ಪೋಸ್ ನೀಡಿದರು. ನಿರ್ಮಲಾ ಸೀತಾರಾಮನ್ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಪೂರ್ಣ ಬಜೆಟ್ ಅನ್ನು ಹೊಸದಾಗಿ ಆಯ್ಕೆಯಾದ ಸರ್ಕಾರವು ಜುಲೈನಲ್ಲಿ ಮಂಡಿಸಲಿದೆ. ಮಧ್ಯಂತರ ಬಜೆಟ್ ಆಗಿರುವುದರಿಂದ, ಪ್ರಮುಖ ನೀತಿ ಬದಲಾವಣೆಗಳು ಅಥವಾ ದೊಡ್ಡ ಪ್ರಕಟಣೆಗಳನ್ನು ಮಾಡದಿರಬಹುದು, ಆದರೆ ನಿರೀಕ್ಷೆಗಳು ಇನ್ನೂ ಹೆಚ್ಚಾಗಿದೆ.