ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ ( School Education Department ) 2023-24ನೇ ಸಾಲಿನ ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ( SSLC Preparatory Exam 2024 ) ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. 2023-24ನೇ ಸಾಲಿನ ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಪ್ರಕಟಿಸಲಾಗಿದೆ ಎಂದಿದ್ದಾರೆ.
ಹೀಗಿದೆ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ
-ದಿನಾಂಕ 26-02-2024ರ ಸೋಮವಾರ – ಪ್ರಥಮ ಭಾಷೆ – ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್(NCERT), ಸಂಸ್ಕೃತ
-ದಿನಾಂಕ 27-02-2024 – ಮಂಗಳವಾರ – ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ
-ದಿನಾಂಕ 28-02-2024 – ಬುಧವಾರ – ತೃತೀಯ ಭಾಷೆ – ಹಿಂದಿ ( NCERT), ಹಿಂದಿ, ಕನ್ನಡ, ಇಂಗ್ಲೀಷ್, ಆರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
-ದಿನಾಂಕ-29-02-2024 – ಗುರುವಾರ – ಕೋರ್ ಸಬ್ಜೆಕ್ಟ್ – ಗಣಿತ
-ದಿನಾಂಕ 01-03-2024 – ಶುಕ್ರವಾರ – ಕೋರ್ ಸಬ್ಜೆಕ್ಟ್ – ವಿಜ್ಞಾನ
– ದಿನಾಂಕ 02-03-2024 – ಶನಿವಾರ – ಕೋರ್ ಸಬ್ಜೆಕ್ಟ್ – ಸಮಾಜ ವಿಜ್ಞಾನ
BREAKING: ‘ಜಯದೇವ ಹೃದ್ರೋಗ ಸಂಸ್ಥೆ’ಯ ಪ್ರಭಾರ ನಿರ್ದೇಶಕರಾಗಿ ‘ಡಾ.ರವೀಂದ್ರನಾಥ್’ ನೇಮಕ
BREAKING : ‘CUET PG 2024’ ನೋಂದಣಿ ಗಡುವು ವಿಸ್ತರಣೆ ; ಫೆ.7ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ