ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದಂತ ಡಾ.ಸಿಎನ್ ಮಂಜುನಾಥ್ ಅವರು ಇಂದು ನಿವೃತ್ತರಾಗಿದ್ದರು. ಈ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಪ್ರಭಾರ ನಿರ್ದೇಶಕರನ್ನಾಗಿ ಡಾ.ರವೀಂದ್ರ ನಾಥ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್ ಎಂಬ ಧ್ಯೇಯದೊಂದಿಗೆ ಜನಸಾಮಾನ್ಯರಿಗೆ ಗುಣಮುಟ್ಟದ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿದ್ದವರು ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಅವರು. ಇಂತಹ ಅವರು ಇಂದು ತಮ್ಮ ಸೇವೆಯಿಂದ ನಿವೃತ್ತರಾಗಿದ್ದಾರೆ.
ಕಳೆದ 16 ವರ್ಷಗಳಿಂದ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದಂತ ಅವರು, 75 ಲಕ್ಷ ಜನರಿಗೆ ಹೃದ್ರೋಗ ಚಿಕಿತ್ಸೆ, 8 ಲಕ್ಷ ಜನರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದರು.
ಇದೀಗ ಡಾ.ಸಿಎನ್ ಮಂಜುನಾಥ್ ಅವರು ನಿವೃತ್ತರಾದ ನಂತ್ರ, ಜಯದೇವ ಹೃದ್ರೋಗ ಸಂಸ್ಥೆಗೆ ಪ್ರಭಾರ ನಿರ್ದೇಶಕರನ್ನಾಗಿ 69 ವರ್ಷದ ಡಾ.ರವೀಂದ್ರನಾಥ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಮಂಗಳೂರಿನಲ್ಲಿ ಫೆ.17ರಂದು ‘ಕಾಂಗ್ರೆಸ್ ಪಕ್ಷ’ದಿಂದ ‘ಬೃಹತ್ ಕಾರ್ಯಕರ್ತರ ಸಮಾವೇಶ’ ಆಯೋಜನೆ
BREAKING : ‘CUET PG 2024’ ನೋಂದಣಿ ಗಡುವು ವಿಸ್ತರಣೆ ; ಫೆ.7ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ