ಬೆಂಗಳೂರು: ಗುತ್ತಿಗೆದಾರರೊಬ್ಬರಿಂದ ಬಹುಮಹಡಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡೋ ಸಲುವಾಗಿ 1.5 ಲಕ್ಷ ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲಿ ಬೆಸ್ಕಾಂ ಜೆಇ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರೋ ಘಟನೆ ನಡೆದಿದೆ.
ಬೆಂಗಳೂರಿನ ವಿಜಯನಗರದ ಬೆಸ್ಕಾಂ ಕಚೇರಿಯ ಜೆಇ ಪ್ರಕಾಶ್ ಎಂಬುವರು ಗುತ್ತಿಗೆದಾರ ಮಂಜೇಶ್ ಎಂಬುವರಿಗೆ ಬಹುಮಹಡಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡೋದಕ್ಕೆ 2.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಎಲೆಕ್ಟ್ರಿಕ್ ಗುತ್ತಿಗೆದಾರ ಮಂಜೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಮುಂಗಡವಾಗಿ 1.5 ಲಕ್ಷ ಲಂಚದ ಹಣವನ್ನು ಬೆಸ್ಕಾಂ ಜೆಇ ಪ್ರಕಾಶ್ ಅವರಿಗೆ ನೀಡೋದಕ್ಕೆ ನಿಗದಿ ಪಡಿಸಲಾಗಿತ್ತು. ಅದರಂತೆ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಂತ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಬೆಸ್ಕಾಂ ಜೆಇ ಪ್ರಕಾಶ್ ಅವರನ್ನು ಹಿಡಿದಿದ್ದಾರೆ.
ಇದೀಗ ಬೆಸ್ಕಾಂ ಜೆಇ ಪ್ರಕಾಶ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿಕೊಂಡು, ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
BREAKING: ‘ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ’ರಾಗಿ ಬಿಸಿಸಿಐ ಕಾರ್ಯದರ್ಶಿ ‘ಜಯ್ ಶಾ’ ಮರು ನೇಮಕ
BREAKING : ಮೆಟ್ರೋ ಪ್ರಯಾಣಿಕರೇ ಹುಷಾರ್ : ಇನ್ನುಮುಂದೆ ಅಸಭ್ಯ ವರ್ತನೆ ತೋರಿದರೆ ಬೀಳುತ್ತೆ ದಂಡ