ಬೆಂಗಳೂರು: ನಗರದಲ್ಲಿ ಅಗ್ನಿ ಅವಘಡದ ಬೆನ್ನಲ್ಲೇ, ಮತ್ತೊಂದು ಭೀಕರ ಅವಘಡ ನಡೆದಿದೆ. ಅದೇ ಶ್ರೀರಾಮನ ಕಟೌಟ್ ಕಟ್ಟೋ ಸಂದರ್ಭದಲ್ಲಿ, ಅದು ಮುರಿದು ಬಿದ್ದು ಮೂವರು ಗಾಯಗೊಂಡಿರೋ ಘಟನೆ ನಡೆದಿದೆ.
ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ ಪಕ್ಕದಲ್ಲಿ ಶ್ರೀರಾಮನ ಕಟೌಟ್ ನಿರ್ಮಿಸೋ ಕಾರ್ಯ ನಡೆಸಲಾಗುತ್ತಿತ್ತು. ಈ ವೇಳೆಯಲ್ಲಿ ದಿಢೀರ್ ಮುರಿದು ಬಿದ್ದ ಕಾರಣ ಮೂವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಶ್ರೀರಾಮನ ಕಟೌಟ್ ದಿಢೀರ್ ಮುರಿದು ಬಿದ್ದ ಹಿನ್ನಲೆಯಲ್ಲಿ ಅದನ್ನು ಕಟ್ಟುತ್ತಿದ್ದಂತ ಮೂವರು ಅದರಡಿ ಸಿಲುಕಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಅಂದಹಾಗೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ, ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯ ಬಳಿಕ, ಶ್ರೀರಾಮನ ಕಟೌಟ್ ಕಟ್ಟೋ ಪ್ರಕ್ರಿಯೆ ಹಲವೆಡೆ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಇಂದು ಹೆಚ್ ಎಎಲ್ ಏರ್ಪೋರ್ಟ್ ಬಳಿಯಲ್ಲಿ ನಿರ್ಮಾಣ ಮಾಡುತ್ತಿದ್ದಂತ ವೇಳೆಯಲ್ಲಿ ಇಂತಹ ಅವಘಡ ನಡೆದಿದೆ.
BREAKING: ‘ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ’ರಾಗಿ ಬಿಸಿಸಿಐ ಕಾರ್ಯದರ್ಶಿ ‘ಜಯ್ ಶಾ’ ಮರು ನೇಮಕ
BREAKING : ಮೆಟ್ರೋ ಪ್ರಯಾಣಿಕರೇ ಹುಷಾರ್ : ಇನ್ನುಮುಂದೆ ಅಸಭ್ಯ ವರ್ತನೆ ತೋರಿದರೆ ಬೀಳುತ್ತೆ ದಂಡ