ನವದೆಹಲಿ : ಬಾಯಿಯ ಕಿರಿಕಿರಿ ಮತ್ತು ತುಟಿಗಳಲ್ಲಿ ಊತವನ್ನ ಅನುಭವಿಸಿದ ಒಂದು ದಿನದ ನಂತರ ಮಯಾಂಕ್ ಅಗರ್ವಾಲ್ ಅವರನ್ನ ಅಗರ್ತಲಾದ ಐಎಲ್ಎಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅಂದ್ಹಾಗೆ, ನವದೆಹಲಿಗೆ ತೆರಳುವ ವಿಮಾನ ಟೇಕ್ ಆಫ್ ಆಗುವ ಮುನ್ನ ಅನಾರೋಗ್ಯಕ್ಕೆ ಒಳಗಾದ ಅಗರ್ವಾಲ್ ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿತ್ತು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ಕೋಚ್, “ಮಯಾಂಕ್ ಚೇತರಿಸಿಕೊಳ್ಳಲು 2 ರಿಂದ 3 ದಿನಗಳು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸಿದ್ದೆವು. 24 ಗಂಟೆಗಳಲ್ಲಿ ಅವರನ್ನ ಬಿಡುಗಡೆ ಮಾಡಲಾಯಿತು. ಏನಾಯಿತೋ ಅದು ಗತಕಾಲ. ನಾನು ಈಗ ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ತ್ರಿಪುರಾದಲ್ಲಿ ಅವರ ಕಾಳಜಿ ಅದ್ಭುತವಾಗಿತ್ತು” ಎಂದರು.
ಏತನ್ಮಧ್ಯೆ, ಮಯಾಂಕ್ ಅವರು ಡಿಸ್ಚಾರ್ಜ್ ಆದ ನಂತ್ರ ಬೆಂಗಳೂರಿಗೆ ಹಿಂದಿರುಗಿದ್ದು, ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.
BREAKING : ಹಿಂದೂಗಳಿಗೆ ಬಹುದೊಡ್ಡ ಗೆಲುವು : ಜ್ಞಾನವಾಪಿ ಮಸೀದಿಯಲ್ಲಿ ‘ಪೂಜೆ ಸಲ್ಲಿಕೆ’ಗೆ ಅನುಮತಿ
ವಿಧಾನ ಮಂಡಲದ ಅಧಿವೇಶನದಲ್ಲಿ ‘ನಾಮಫಲಕ’ಗಳಲ್ಲಿ ‘ಕನ್ನಡ ಬಳಕೆ ಕಡ್ಡಾಯ’ ಮಸೂದೆ ಮಂಡನೆ- ಸಿಎಂ ಸಿದ್ಧರಾಮಯ್ಯ
BREAKING : ಭಾರತದ ‘GDP ಬೆಳವಣಿಗೆ ದರ ಶೇ.7.3ಕ್ಕೆ’ ಏರಿಕೆ : IMF ಕಾರ್ಯನಿರ್ವಾಹಕ ನಿರ್ದೇಶಕ