ಬೆಂಗಳೂರು: ಫೆ.30ರ ನಿನ್ನೆಯಿಂದ ಆರಂಭವಾಗಬೇಕಿದ್ದಂತ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಮುಂದೂಡಿಕೆ ಮಾಡಲಾಗಿದೆ. ಫೆಬ್ರವರಿ.3ರಿಂದ ನಡೆಯಲಿದೆ.
ಶಾಲಾ ಶಿಕ್ಷಣ ಇಲಾಖೆಯು 2023-24ನೇ ಸಾಲಿನ ಮುಖ್ಯ ಶಿಕ್ಷಕ ಮತ್ತು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಜನವರಿ.30ರಂದು ವಲಯ ವರ್ಗಾವಣೆ ಕೌನ್ಸೆಲಿಂಗ್ ನಡೆಸಲು ನಿರ್ಧರಿಸಲಾಗಿತ್ತು. ಆದ್ರೇ ಈ ವರ್ಗಾವಣೆಯನ್ನು ಫೆಬ್ರವರಿ.3ಕ್ಕೆ ಮುಂದೂಡಿದೆ.
ಫೆಬ್ರವರಿ.3ರಂದು ಬಿ ವಲಯದಿಂದ ಎ ವಲಯಕ್ಕೆ ಹಾಗೂ ಸಿ ವಲಯದಿಂದ ಬಿ ವಲಯಕ್ಕೆ ಮುಖ್ಯ ಶಿಕ್ಷಕರು, ಹಿರಿಯ ಮುಖ್ಯ ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಯಲಿದೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಹಾಗೂ ಮುಖ್ಯ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನವನ್ನು ಬಡ್ತಿ ನೀಡಲು ಅಧಿಸೂಚನೆ ಹೊರಡಿಸಲಾಗಿತ್ತು.
ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಜಿಲ್ಲಾ ಉಪ ನಿರ್ದೇಶಕರ ಕೋರಿಕೆ ಮೇರೆಗೆ ನಿರ್ಧರಿಸಬೇಕಿರುವ ಕಾರಣ ಫೆಬ್ರವರಿ.3ರಂದು ನಡೆಸೋದಕ್ಕೆ ನಿರ್ಧರಿಸಲಾಗಿದೆ.