ಬೆಂಗಳೂರು: ನಾಳೆ ಸೇವಾ ನಿವೃತ್ತಿ ಹೊಂದುತ್ತಿರುವ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ನಾಡಿಗೆ ನೀಡಿರುವ ಕೊಡುಗೆ ಉಲ್ಲೇಖನಾರ್ಹ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ನಾಳೆ ಸೇವೆಯಿಂದ ನಿವೃತ್ತರಾಗುತ್ತಿರುವ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಇಂದು ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಬೀಳ್ಗೊಡಲಾಯಿತು.
ಈ ಬಳಿಕ ಮಾತನಾಡಿದಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಸುಮಾರು 5 ಸಾವಿರ ಕಾರ್ಯನಿರತ ಐ.ಎ.ಎಸ್. ಅಧಿಕಾರಿಗಳಿದ್ದಾರೆ. ಎಲ್ಲರಿಗೂ ಈ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನ ಸದಾ ಸ್ಮರಿಸುವಂತಹ ಕಾರ್ಯ ಮಾಡಬೇಕು ಎಂದು ಹೇಳಿದರು.
ಅರಣ್ಯ, ಜೀವಿಶಾಸ್ತ್ರ, ಪರಿಸರ ಇಲಾಖೆಯ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯನ್ನೂ ನಿಭಾಯಿಸಿದ ಅಖ್ತರ್ ಸದಾ ಹಸನ್ಮುಖಿ, ಅವರು ಎಲ್ಲ ಜವಾಬ್ದಾರಿಯನ್ನೂ ನಗು ನಗುತ್ತಲೇ ನಿಭಾಯಿಸುತ್ತಿದ್ದರು, ಇಲಾಖೆಯಲ್ಲಿ ಸುಧಾರಣೆ ತರಲು ಸಹಕರಿಸಿದರು, ಇಂತಹ ಅಧಿಕಾರಿಗಳು ವಿರಳ ಎಂದು ಈಶ್ವರ ಖಂಡ್ರೆ ಹೇಳಿದರು.
ಜಾವೇದ್ ಅಖ್ತರ್ ಮಾತನಾಡಿ, ಈಶ್ವರ ಖಂಡ್ರೆ ಅವರು ಸಚಿವರಾದ ಬಳಿಕ ಅರಣ್ಯ, ಪರಿಸರ ಇಲಾಖೆಯ ನಡುವೆ ಒಮ್ಮತ ಮೂಡುತ್ತಿದೆ. ಎರಡೂ ಇಲಾಖೆಗಳೂ ಸಂಯೋಜನೆಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದು ಇದರಿಂದ ಪರಿಸರ, ಪ್ರಕೃತಿಯ ಉಳಿವಿಗೆ ಸಹಕಾರಿಯಾಗುತ್ತಿದೆ ಎಂದರು. ತಮ್ಮ ಮೂರು ದಶಕಗಳ ಸೇವಾ ಅವಧಿಯ ಕೆಲವು ಕ್ಷಣಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಅರಣ್ಯ ಕಾರ್ಯಪಡೆ ಮುಖ್ಯಸ್ಥ ಬ್ರಿಜೇಶ್ ದೀಕ್ಷಿತ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ ಇದ್ದರು.
‘ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ಫೆ.1ರಿಂದ ಬೆಂಗಳೂರಿನ ‘ಆನೇಕಲ್ ರೈಲ್ವೆ ಟಿಕೆಟ್ ಕೇಂದ್ರ’ ಪುನರಾರಂಭ
BREAKING : ಭೀಕರ ಕಾರು ಅಪಘಾತದಲ್ಲಿ ರಾಜಸ್ಥಾನ ಕಾಂಗ್ರೆಸ್ ಮುಖಂಡ ‘ಮನ್ವೇಂದ್ರ ಸಿಂಗ್ ಪತ್ನಿ’ ಸಾವು