ಬೆಂಗಳೂರು: ಫೆಬ್ರವರಿ.1ರ ನಾಳೆಯಿಂದ ಆನೇಕಲ್ ನಲ್ಲಿರುವಂತ ನೈರುತ್ಯ ರೈಲ್ವೆಯ ಪ್ರಯಾಣಿಕರ ಕಾಯ್ದಿರಿಸುವಿಕೆಯ ಟಿಕೆಟ್ ಕೌಂಟರ್ ಸಾರ್ವಜನಿಕರ ಸೇವೆಗೆ ಪುನರಾರಂಭಗೊಳ್ಳಲಿದೆ.
ಈ ಕುರಿತಂತೆ ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಆನೇಕಲ್‌ನಲ್ಲಿರುವ ಗಣಕೀಕೃತ ಪ್ರಯಾಣಿಕರ ಕಾಯ್ದಿರಿಸುವಿಕೆ ಕೇಂದ್ರವು 01.02.2024 ರಿಂದ ಕಾಯ್ದಿರಿಸುವಿಕೆ ಪುನರಾರಂಭಿಸಲಾಗುತ್ತಿದೆ ಎಂದು ತಿಳಿಸಿದೆ.
ಕೇಂದ್ರವು ಸೋಮವಾರದಿಂದ ಶನಿವಾರದವರೆಗೆ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಿಗ್ಗೆ 08.00 ರಿಂದ ಮಧ್ಯಾಹ್ನ 2.00 ರವರೆಗೆ ಕಾರ್ಯನಿರ್ವಹಿಸುತ್ತದೆ.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು ಎಂದು ಹೇಳಿದೆ.
ಇಂತಹ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆಯ ಕೌಂಟರ್ ಫೆಬ್ರವರಿ.1, 2024ರ ನಾಳೆಯಿಂದ ಪುನರಾರಂಭಗೊಳ್ಳಲಿದೆ. ರೈಲ್ವೆ ಪ್ರಯಾಣಿಕರು ಈ ಟಿಕೆಟ್ ಕೌಂಟರ್ ಮೂಲಕವೂ ಟಿಕೆಟ್ ಖರೀದಿಸಬಹುದಾಗಿ ಎಂದು ತಿಳಿಸಿದೆ.