ಬೆಂಗಳೂರು: ಸಿಲಿಕಾನ್ ಸಿಟಿಯ ಶಿವಾಜಿನಗರದಲ್ಲಿ ಹಾರಿಸಲಾಗುತ್ತಿದ್ದಂತ ಹಸಿರು ಧ್ವಜವನ್ನು ಹಿಂದೂ ಸಂಘಟನೆಗಳ ಒತ್ತಾಯದ ಬೆನ್ನಲ್ಲೇ ತೆರವುಗೊಳಿಸಲಾಗಿದೆ. ಆ ಧ್ವಜ ಕಂಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ.
ಬೆಂಗಳೂರಿನ ಶಿವಾಜಿನಗರದಲ್ಲಿರುವಂತ ಚಾಂದಿನಿ ಚೌಕ್ ನಲ್ಲಿನ ಬಿಬಿಎಂಪಿ ಧ್ವಜ ಸ್ತಂಭದಲ್ಲಿ ಹಸಿರು ಧ್ವಜವನ್ನು ಕಟ್ಟಲಾಗಿತ್ತು. ಇದಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ವಿರೋಧವನ್ನು ವ್ಯಕ್ತ ಪಡಿಸಿದ್ದರು.
ಹಿಂದೂಪರ ಸಂಘಟನೆಗಳ ವಿರೋಧದಿಂದಾಗಿ ಪೊಲೀಸರು ಶಿವಾಜಿನಗರ ಚಾಂದಿನಿ ಚೌಕ್ ನಲ್ಲಿದ್ದಂತ ಹಸಿರು ಧ್ವಜವನ್ನು ತೆರವುಗೊಳಿಸಿದ್ದಾರೆ. ಅಲ್ಲದೇ ಆ ಧ್ವಜ ಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ.
BREAKING: ಮಂಡ್ಯ ಕೆರಗೋಡಿ ‘ಹನುಮಧ್ವಜ’ ವಿವಾದಕ್ಕೆ ಬಿಗ್ ಟ್ವಿಸ್ಟ್: ಗ್ರಾಮ ಪಂಚಾಯ್ತಿ ‘ನಡವಳಿ ಪುಸ್ತಕ’ವೇ ನಾಪತ್ತೆ
ಇದು ಅಂಚೆ ಕಚೇರಿಯ ಅದ್ಭುತ ಯೋಜನೆ: ನೀವು ತುಂಬಾ ಬಡ್ಡಿಯನ್ನು ಪಡೆಯುತ್ತೀರಿ