ಬೆಂಗಳೂರು: ಜ.23 ರಂದು ನಡೆದ 545 ಪಿಎಸ್ಐ ಹುದ್ದೆಗಳ ನೇರ ನೇಮಕಾತಿ ಎಕ್ಸಾಂನ ಕೀ ಉತ್ತರ ಪ್ರಕಟ ಪ್ರಕಟ ಮಾಡಲಾಗಿದೆ. ಅಭ್ಯರ್ಥಿಗಳು ದಿನಾಂಕ 30-01-2024 ರಿಂದ 05-02-2024 ರ ಸಂಜೆ 05-00 ಗಂಟೆಯೊಳಗೆ ಪ್ರಾಧಿಕಾರದ ವೆಬ್ಸೈಟ್ನಲ್ಲಿ ನೀಡಲಾಗಿರುವ ಲಿಂಕ್ ಬಳಸಿ ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪೊಲೀಸ್ ಇಲಾಖೆಯ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮದ ಆರೋಪ ಎದುರಾದ ಕಾರಣ, ದೂರು ದಾಖಲಾಗಿದ್ದವು. ಈ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ಪಾಲ್ ಸೇರಿ ಹಲವು ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು, ಪರೀಕ್ಷಾರ್ಥಿಗಳು ಬಂಧಿತರಾಗಿದ್ದರು. ಪರೀಕ್ಷಾ ಅಕ್ರಮ ನಡೆದಿದ್ದು ಖಚಿತವಾದ ಕೂಡಲೇ ನೇಮಕಾತಿ ಅಧಿಸೂಚನೆಯನ್ನು ಸರ್ಕಾರ ರದ್ದುಗೊಳಿಸಿತ್ತು.
https://cetonline.karnataka.gov.in/keawebentry456/PSI2023/PSI%20-%20PROVISIONAL%20ANSWER%20KEYkannada.pdf