ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಜಯದೇವ ಹೃದ್ರೋಗ ಸಂಸ್ಥೆಯ ( Jayadeva Institute of Cardiology ) ನಿರ್ದೇಶಕರಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವಂತ ಡಾ.ಸಿಎನ್ ಮಂಜುನಾಥ್ ( Dr.CN Manjunath ) ಅವರು, ಜನವರಿ.31ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಇಂತಹ ಅವರಿಗೆ ರಾಜ್ಯ ಸರ್ಕಾರದಿಂದ ಅದ್ಧೂರಿಯಾಗಿ ಇಂದು ಬೀಳ್ಕೊಡುಗೆ ನೀಡಲಾಯಿತು.
ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಡಾ.ಸಿಎನ್ ಮಂಜುನಾಥ್ ಮಾಡಿದ ಕಾರ್ಯ, ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿತ್ತು. ಅವರ ಸೇವಾವಧಿ ಕಳೆದ ವರ್ಷವೇ ಮುಕ್ತಾಯಗೊಳ್ಳುತ್ತಿದ್ದರೂ, ರಾಜ್ಯ ಸರ್ಕಾರ ಮತ್ತೊಂದು ಅವಧಿಗೆ ಮುಂದುವರೆಸಿ ಆದೇಶ ಮಾಡಿತ್ತು. ಇಂತಹ ಅವರು ಜನವರಿ.31ರಂದು ನಿವೃತ್ತರಾಗಲಿದ್ದಾರೆ.
ಹೀಗಾಗಿ ಇದೇ ತಿಂಗಳ ಜ.31 ರಂದು ಸೇವೆಯಿಂದ ನಿವೃತ್ತಿಯಾಗಲಿರುವ ಜಯದೇವ ಹೃದ್ರೋಗ ಸಂಸ್ಥೆಯ ನಿದೇರ್ಶಕ ಡಾ. ಸಿ.ಎನ್. ಮಂಜುನಾಥ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವೈದ್ಯಕೀಯ ಶಿಕ್ಷಣ) ಜಾವೀದ್ ಅಖ್ತರ್ ಅವರ ಬೀಳ್ಕೊಡೆಗೆ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಪಾಲ್ಗೊಂಡು ಇಂದು ಬೆಂಗಳೂರುನಲ್ಲಿ ಸನ್ಮಾನಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಉಪಕುಲಪತಿ ಡಾ ಎಂಕೆ ರಮೇಶ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ ಸುಜಾತಾ ರಾಥೋಡ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶಿವಮೊಗ್ಗ: ಜ.31ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
‘ರೈತ’ರಿಗೆ ಗುಡ್ ನ್ಯೂಸ್: ಶೇ.50ರಷ್ಟು ರಿಯಾಯಿತಿ ದರದಲ್ಲಿ ‘ಕೃಷಿ ಉಪಕರಣ’ ಪಡೆಯಲು ಅರ್ಜಿ ಆಹ್ವಾನ