ಬೆಂಗಳೂರು: ಕ್ಷಯರೋಗ ಅಥವಾ ಟಿಬಿ, ಬ್ಯಾಕ್ಟೀರಿಯಾಗಳ ಕಾರಣದಿಂದ ಉಂಟಾಗುತ್ತದೆ. ಇದು ನಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಕೊಡಿಸುವುದು ಅಗತ್ಯ. ರಾಜ್ಯ ಸರ್ಕಾರವು ಕ್ಷಯಮುಕ್ತ ಕರ್ನಾಟಕಕ್ಕಾಗಿ ಪ್ರಯತ್ನಿಸುತ್ತಿದೆ.
ಅದರ ಸಲುವಾಗಿ ಸೋಂಕಿಗೆ ಒಳಗಾದ ವ್ಯಕ್ತಿಗೆ ಕ್ಷಯರೋಗ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಪೌಷ್ಠಿಕ ಆಹಾರಕ್ಕಾಗಿ ‘ನಿಕ್ಷಯ್ ಪೋಷಣ್ ಯೋಜನೆ’ಯಡಿ ಮಾಸಿಕ 500 ರೂ.ಗಳನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿದೆ. ʼನಿಮ್ಮ ಆರೋಗ್ಯ, ನಮ್ಮ ಬದ್ಧತೆʼ ಅನ್ನುವುದು ಜನಪರ ಸರ್ಕಾರದ ನಿಲುವು ಅಂತ ಸರ್ಕಾರ ತಿಳಿಸಿದೆ.
ಇನ್ನೂಇತ್ತೀಚೆಗೆ ಆನೆಗಳು ಆಹಾರ ಹುಡುಕಿಕೊಂಡು ನಾಡಿಗೆ ಬರಲು ಪ್ರಾರಂಭಿಸಿದೆ. ಇದರಿಂದಾಗಿ ಜನರು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡಿರುವ ಸರ್ಕಾರವು, ಆನೆಗಳಿಗೆ ಮೇವು ಹಾಗೂ ನೀರನ್ನು ಕಾಡಿನಲ್ಲಿಯೇ ಒದಗಿಸಿಕೊಡಲು ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದೆ. ಇದರಿಂದಾಗಿ ಆನೆಗಳು ಕಾಡಿನಿಂದ ಹೊರಬರುವುದು ಕಡಿಮೆಯಾಗುತ್ತದೆ. ಆನೆ ಮಾನವ ಸಂಘರ್ಷವನ್ನು ತಪ್ಪಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.