ಬೆಂಗಳೂರು: ನಿನ್ನೆಯಷ್ಟೇ 34 ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಿ ಸಿಎಂ ಸಿದ್ಧರಾಮಯ್ಯ ಅಧಿಕೃತ ಆದೇಶ ಮಾಡಿದ್ದರು. ಈ ಬೆನ್ನಲ್ಲೇ ಈಗ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಕೊಡೋದಾದ್ರೇ ಸಚಿವ ಸ್ಥಾನವನ್ನೇ ನೀಡುವಂತೆ ಶಾಸಕರೊಬ್ಬರು ಆಗ್ರಹಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾ ರೆಡ್ಡಿಯವರು ನನಗೆ ನಿಗಮ ಮಂಡಳಿ ಸ್ಥಾನ ನೀಡಿರೋದಕ್ಕೆ ತೃಪ್ತಿಯಿಲ್ಲ. ನಾನು ಜನಸೇವೆಯನ್ನು ಬಯಸೋ ಹುದ್ದೆಯೇ ಹೊರತು ಇಂತಹ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಅಧ್ಯಕ್ಷ ಸ್ಥಾವನ್ನಲ್ಲ ಎಂಬುದಾಗಿ ಅಸಮಾಧನ ಹೊರ ಹಾಕಿದ್ದಾರೆ.
ನಾನು ಈಗಾಗಲೇ ಹಲವು ಬಾರಿ ಕಾಂಗ್ರೆಸ್ ವರಿಷ್ಠರನ್ನು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ನನ್ನ ಬೇಡಿಕೆ ಇಟ್ಟಿದ್ದೇನೆ. ಕೊಡುವುದಾದ್ರೇ ಸಚಿವ ಸ್ಥಾನವನ್ನೇ ಕೊಡುವಂತೆಯೂ ಕೇಳಿದ್ದೇನೆ. ಅದಕ್ಕೆ ಒಪ್ಪಿಗೆ ಕೂಡ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಕ್ರಮ ವಹಿಸೋ ನಿರೀಕ್ಷೆಯಿದೆ ಎಂಬುದಾಗಿ ತಿಳಿಸಿದರು.
2021-22ರಲ್ಲಿ ‘ಉನ್ನತ ಶಿಕ್ಷಣದಲ್ಲಿ’ ದಾಖಲಾತಿ 4.33 ಕೋಟಿಗೆ ಏರಿಕೆ: 2014 ರಿಂದ 26.5 ರಷ್ಟು ಹೆಚ್ಚಳ: ಸಮೀಕ್ಷೆ
BREAKING: ಲೋಕಸಭಾ ಚುನಾವಣೆ: ರಾಜ್ಯದ 28 ಕ್ಷೇತ್ರಗಳಿಗೆ ‘ಬಿಜೆಪಿ ಉಸ್ತುವಾರಿ’ಗಳು ನೇಮಕ, ಇಲ್ಲಿದೆ ಸಂಪೂರ್ಣ ಲೀಸ್ಟ್