ಗದಗ: ಈ ವರ್ಷದಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಜಗತ್ತಿನ ಪ್ರಭಾವಿ ಸಂತರೊಬ್ಬರು ಹಾಗೂ ಪ್ರಧಾನಿಗಳಿಬ್ಬರು ಸಾವಿಗೀಡಾಗುವ ಲಕ್ಷಣಗಳಿವೆ ಎಂಬುದಾಗಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತಾಡಿದಂತ ಅವರು, 2024ರಲ್ಲಿ ಅಕಾಲಿಕ ಮಳೆ, ಭೂಕಂಪ, ಜಲಕಂಟ, ಅಣುಬಾಂಬ್ ಸ್ಪೋಟದಂತಹ ಸನ್ನಿವೇಶ, ಯುದ್ಧ ಭೀಟಿ ಉಂಟಾಗಲಿದೆ. ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಎಂಬುದಾಗಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಸಂಕ್ರಾಂತಿ ನಂತ್ರ ಹಾಗೂ ಯುಗಾದಿ ನಂತ್ರ ಭವಿಷ್ಯ ಹೇಳಲಾಗುತ್ತದೆ. ಸಂಕ್ರಾಂತಿ ನಂತ್ರ ವ್ಯಾಪಾರ, ವಾಣಿಜ್ಯ, ಯುಗಾದಿ ನಂತ್ರ ದೇಶದ ಸಮಗ್ರ ಮಳೆ, ಬೆಳೆ, ಜರು, ರಾಜರು ಇತ್ಯಾದಿಗಳ ಬಗ್ಗೆ ಹೇಳಲಾಗುತ್ತದೆ. ಈಗ ರಾಜಕೀಯ ಕುರಿತು ಹೇಳುವುದು ಪ್ರಶಸ್ತವಲ್ಲ ಎಂದರು.
ಪಿ.ಜಿ ಮಾಲೀಕರೇಗಮನಿಸಿ, ಈ ಮಾರ್ಗಸೂಚಿಗಳ ಪಾಲನೆ ಕಡ್ಡಾಯ, ಬೆಂಗಳೂರು ಪೊಲೀಸರಿಂದ ಎಚ್ಚರಿಕೆ